ಮಧ್ಯಪ್ರದೇಶ : ಭಾರತೀಯ ವಾಯುಪಡೆ(ಐಎಎಫ್)ಯ ಮಿರಾಜ್ 2000 ತರಬೇತಿ ನಿರತ ಯುದ್ಧ ವಿಮಾನ ಪತನಗೊಂಡಿರುವ ಘಟನೆ ಇಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬಹ್ರೆತಾ ಸಾನಿ ಗ್ರಾಮದ ಬಳಿ ನಡೆದಿದೆ.
ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರ ಜಿಗಿದಿದ್ದು, ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಹೊಲದಲ್ಲಿ ಜೆಟ್ ಪತನವಾದ ಬಳಿಕ ಸುಟ್ಟು ಕರಕಲಾಗಿದ್ದು, ಸದ್ಯ ಸ್ಥಳೀಯರ ಸಹಾಯದಿಂದ ಇಬ್ಬರು ಪೈಲಟ್‌ಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಗ್ಗೆ ಭಾರತೀಯ ವಾಯುಪಡೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಭಾರತೀಯ ವಾಯುಪಡೆಯ ಮಿರಾಜ್ 2000 ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ವಾಡಿಕೆಯ ತರಬೇತಿಯ ಸಮಯದಲ್ಲಿ ಶಿವಪುರಿ (ಗ್ವಾಲಿಯರ್) ಬಳಿ ಅಪಘಾತಕ್ಕೀಡಾಗಿದೆ. ಇಬ್ಬರೂ ಪೈಲಟ್ ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಐಎಎಫ್ ತನಿಖೆಗೆ ಆದೇಶಿಸಿದೆ.” ಎಂದು ಬರೆದಿದೆ.
ಇದನ್ನೂ ಓದಿ : http://ಮನೆಯಲ್ಲಿ ಜಾರಿಬಿದ್ದ ಬಿಗ್ ಸ್ಪರ್ಧಿ ಶ್ರುತಿ ಪ್ರಕಾಶ್ – ಆಪರೇಷನ್ ಮಾಡಿಸಿಕೊಂಡು ರೆಸ್ಟ್ನಲ್ಲಿರುವ ನಟಿ!
