ಇಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ – ಮಧ್ಯಾಹ್ನದೊಳಗೆ ಸಚಿವರ ಮೊದಲ ಪಟ್ಟಿ ಫೈನಲ್?

ಬೆಂಗಳೂರು : ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಭೇಟಿ ವೇಳೆ ಹೈಕಮಾಂಡ್ ನಾಯಕರೊಂದಿಗೆ ಸಂಭಾವ್ಯ ಸಚಿವರ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ಶುರುವಾಗಿದ್ದು, ಹೈಕಮಾಂಡ್ ಈಗಾಗಲೇ ತನ್ನದೇ ಆದ ವಿಶೇಷ ತಂತ್ರದೊಂದಿಗೆ ಸಜ್ಜಾಗಿದೆ. ಜಿಲ್ಲಾವಾರು, ಸಮುದಾಯವಾರು ಪಟ್ಟಿ ಇಟ್ಟುಕೊಂಡು ಹೈಕಮಾಂಡ್ ಫಿಲ್ಟರ್ ಮಾಡಲು ಭಾರಿ ಕಸರತ್ತು ನಡೆಸುತ್ತಿದೆ.

ಈಗಾಗಲೇ ಹತ್ತಾರು ಮಂದಿ ಆಕಾಂಕ್ಷಿಗಳು ದೆಹಲಿ ತಲುಪಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ದೆಹಲಿ ತಲುಪಿದ ತಕ್ಷಣವೇ ಕಾಂಗ್ರೆಸ್​ ವರಿಷ್ಟರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲೇ ಅಂತಿಮ ಸುತ್ತಿನ ಫಿಲ್ಟರೇಶನ್ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಮೊದಲ ಹಂತದ ಸಚಿವರ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ.

ಇದನ್ನೂ ಓದಿ : ನನಗೆ ಸುಗಂಧರಾಜ ಹೂವಿನ ಹಾರ ಹಾಕಬೇಡಿ – ಡಿ.ಕೆ. ಶಿವಕುಮಾರ್!

Btv Kannada
Author: Btv Kannada

Leave a Comment

Read More

Read More