ಬೆಂಗಳೂರು : ವಿಮಾನಯಾನ ರಂಗದ ಅತ್ಯುನ್ನತ ಸಂಸ್ಥೆಯಾದ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ವಲಯದ ಸುರಕ್ಷತಾ ಮಾನ್ಯತಾ ಪ್ರಶಸ್ತಿ-2026ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತ್ಯುನ್ನತ ಗೌರವವಾದ ಡೈಮಂಡ್ ಅವಾರ್ಡ್ ಒಲಿದು ಬಂದಿದೆ.
ಈ ಪ್ರಶಸ್ತಿ ಸುರಕ್ಷಿತ ಹಾಗೂ ಸ್ಥೈರ್ಯಯುತ ವಿಮಾನ ನಿಲ್ದಾಣ ಕಾರ್ಯಾಚರಣೆಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ನಾಯಕತ್ವವನ್ನು ಮತ್ತೊಮ್ಮೆ ದೃಢಪಡಿಸಿದೆ.
ಎಸಿಐ ಸುರಕ್ಷತಾ ಮಾನ್ಯತಾ ಪ್ರಶಸ್ತಿ, ಸುರಕ್ಷತಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಪರಿಣಾಮಕಾರಿ, ಪ್ರಾಯೋಗಿಕ ಮತ್ತು ನವೀನ ಪರಿಹಾರಗಳ ಮೂಲಕ ಸುರಕ್ಷತಾ ನಿರ್ವಹಣೆಯನ್ನು ಬಲಪಡಿಸುವ ವಿಮಾನ ನಿಲ್ದಾಣ ನಿರ್ವಾಹಕರಿಗೆ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿ ‘ಡೈಮಂಡ್ ಅವಾರ್ಡ್’ ಅತ್ಯುನ್ನತ ಗೌರವವಾಗಿದೆ.
ಇದನ್ನೂ ಓದಿ : ಸಮಯ ನೋಡಿ ಹಾಳು ಮಾಡೋದು ಗಲೀಜು ರಾಜಕೀಯ – ಜಮೀರ್ ಆಡಿಯೋ ವಿವಾದಕ್ಕೆ ಎನ್. ಎ. ಹ್ಯಾರಿಸ್ ಕಿಡಿ!
Author: Btv Kannada
Post Views: 328







