RCB-KKR​ ಪಂದ್ಯ ರದ್ದು : ಟಿಕೆಟ್​ ಹಣ ಮರುಪಾವತಿಸುವುದಾಗಿ ಫ್ರಾಂಚೈಸಿ ಘೋಷಣೆ!

ಬೆಂಗಳೂರು : ಭಾರೀ ಮಳೆಯಿಂದಾಗಿ ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯ ರದ್ದಾಗಿತ್ತು. ಈ ಪಂದ್ಯದ ಎಲ್ಲಾ ಮಾನ್ಯ ಟಿಕೆಟ್ ಹೊಂದಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ಫ್ರಾಂಚೈಸಿ ಘೋಷಿಸಿದೆ.

ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸುವ ಅವರ ಖಾತೆಗೆ ಮುಂದಿನ ಕೆಲಸದ 10 ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರ ಒಳಗೆ ಹಣ ಮರುಪಾವತಿಯಾಗದಿದ್ದರೆ ಬುಕಿಂಗ್ ವಿವರಗಳೊಂದಿಗೆ refund@ticketgenie.inಗೆ ಇಮೇಲ್ ಕಳುಹಿಸುವಂತೆ ಸೂಚಿಸಲಾಗಿದೆ. ಟಿಕೆಟ್ ಹೊಂದಿರುವವರು ಮರುಪಾವತಿಗೆ ತಮ್ಮ ಮೂಲ ಟಿಕೆಟ್‌ನ್ನು ಖರೀದಿಸಿದ ಸ್ಥಳದಲ್ಲಿ ಒಪ್ಪಿಸಬೇಕಾಗುತ್ತದೆ. ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಈ ಮರುಪಾವತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರಗಳ ಕಾಲ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಕದನ ವಿರಾಮದ ಬಳಿಕ ಪಂದ್ಯವನ್ನು ಪುನರಾರಂಭಗೊಳಿಸಲಾಗಿತ್ತು. ವಿರಾಟ್‌ ಕೊಹ್ಲಿಯೇ ಪ್ರಮುಖ ಆಕರ್ಷಣೆಯಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಇದನ್ನೂ ಓದಿ : ಬೈಕ್​​ಗೆ ಅಡ್ಡ ಬಂದಿದಕ್ಕೆ ಕೊಡಲಿ ಹಿಡಿದು ರುಂಡ ಕಟ್​ ಮಾಡೋದಾಗಿ ಅವಾಜ್ – ವಿಡಿಯೋ ವೈರಲ್!

Btv Kannada
Author: Btv Kannada

Read More