ಕಲಬುರಗಿ : ಬೈಕ್ಗೆ ಅಡ್ಡ ಬಂದಿದಕ್ಕೆ ಕೈಯಲ್ಲಿ ಕೊಡಲಿ ಹಿಡಿದು ರುಂಡ ಕಟ್ ಮಾಡೋದಾಗಿ ಅವಾಜ್ ಹಾಕಿದ ಘಟನೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ನಡೆದಿದೆ. ನನ್ ಬೈಕ್ ಗೆ ಅಡ್ಡ ಬರ್ತಿಯಾ? ನಿನ್ನಂಥವರಿಗಾಗಿಯೇ ಕೊಡಲಿ ಇಟ್ಟಿದ್ದೇನೆ, ಜಾಸ್ತಿ ಮಾತಾಡಿದ್ರೆ ರುಂಡ ಹಾರುತ್ತೆ ಎಂದು ಬೈಕ್ ಸವಾರ ಖಡಕ್ ಧಮ್ಕಿ ಹಾಕಿದ್ದಾನೆ.
ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಮೂಲ್ ನಿರ್ದೇಶಕರಾಗಿ ಡಿ.ಕೆ ಸುರೇಶ್ ಅವಿರೋಧ ಆಯ್ಕೆ!

Author: Btv Kannada
Post Views: 348