ಬೆಂಗಳೂರು : ಏಳನೇ ತರಗತಿ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬೆಂಗಳೂರಿನ ನಾರಾಯಣ ಇ-ಸ್ಕೂಲ್ನ ಪಿಟಿ ಶಿಕ್ಷಕ ರಾಜೇಶ್ ವಿರುದ್ಧ FIR ದಾಖಲಾಗಿದೆ.

ಶಿಕ್ಷಕ ರಾಜೇಶ್ ಸ್ಟಾಫ್ ರೂಮ್ನಲ್ಲಿ ಶಿಕ್ಷಕರ ಮುಂದೆ ಬಾಲಕನಿಗೆ ಕೈನಿಂದ ಕೆನ್ನೆಗೆ ಬಾರಿಸಿದ್ದಾನೆ. ರಾಜೇಶ್ ಕೆನ್ನೆಗೆ ಹೊಡೆದಿದ್ದರಿಂದ ಕೆನ್ನೆ ಊದಿಕೊಂಡು ಬಾಲಕ ನರಳಾಡಿದ್ದು, ಮಗ ಮನೆಗೆ ಬಾರದ ಕಾರಣ ಬಾಲಕನ ತಂದೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಲೆಯಲ್ಲಿ ಏನೋ ತಪ್ಪು ಮಾಡಿದಕ್ಕೆ ಹೊಡೆದಿರುವುದು ತಂದೆ ಗಮನಕ್ಕೆ ಬಂದಿದೆ. ನಂತರ ಬಾಲಕನನ್ನು ಶಾಲೆಯಿಂದ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಳಿಕ ಪಿಟಿ ಶಿಕ್ಷಕ ರಾಜೇಶ್ ವಿರುದ್ಧ ಬಾಲಕನ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಶಿಕ್ಷಕನನ್ನು ಅರೆಸ್ಟ್ ಮಾಡಿದ್ದಾರೆ.


ಇದನ್ನೂ ಓದಿ : ರಾಜಾಜಿನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ!
Author: Btv Kannada
Post Views: 151







