ಘಾರ್ಗಾ ಚಿತ್ರದ ‘ನೀನು ನನಗೆ’ ರೊಮ್ಯಾಂಟಿಕ್ ಹಾಡು‌‌ ಬಿಡುಗಡೆ!

ಶಿವರಾಜ್‌ಕುಮಾರ್ ಅಭಿನಯದ ಜೋಗಿ, ಪ್ರೇಮ್ ನಟನೆ, ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಹೀಗೆ ಯಶಸ್ವಿ ಚಿತ್ರಗಳನ್ನೇ ನಿರ್ಮಿಸಿದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ತಮ್ಮ ಪುತ್ರ ಅರುಣ್ ರಾಮ್‌ಪ್ರಸಾದ್‌ರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ಘಾರ್ಗ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಚಿತ್ರದ ‘ನೀನು ನನಗೆ’ ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲಾಯಿತು. ಇದೊಂದು ಅಡ್ವೆಂಚರಸ್ ಡ್ರಾಮಾ ಕಥಾನಕವಾಗಿದ್ದು, ಚಿತ್ರದಲ್ಲಿ ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ. ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಫಾರ್ಗಾ ಒಂದು ಊರಿನ ಹೆಸರು. ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ.

ನಿರ್ಮಾಪಕ ರಾಮ್‌ಪ್ರಸಾದ್ ಅವರು, ಚಿತ್ರರಂಗದಲ್ಲಿ 40 ವರ್ಷ ಆಡಿಯೋ ಕಂಪನಿ ಮಾಲೀಕ, ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ, ಇದೀಗ ನನ್ನ ಮಗನನ್ನು ಲಾಂಚ್ ಮಾಡುತ್ತಿದ್ದೇನೆ. ಈ ಚಿತ್ರವನ್ನು 4 ವರ್ಷಗಳ ಹಿಂದೆಯೇ ಶುರು ಮಾಡಿದ್ದೆವು. ಹಲವಾರು ಕಾರಣಗಳಿಂದ ತಡವಾಯಿತು, ಇದೊಂದು ವಿಭಿನ್ನ ಜಾನರ್ ಚಿತ್ರ, ನಾಯಕ ಇಲ್ಲಿ 3 ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಚಿಕ್ಕಮಗಳೂರಿನಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡುವಾಗ ಸೆಟ್ ಸುಟ್ ಸ್ವಲ್ಪ ತೊಂದರೆಯಾಯಿತು. ನಿರ್ದೇಶಕ ಶಶಿಧರ್ ತುಂಬಾ ಚೆನ್ನಾಗಿ ಕಥೆ, ಚಿತ್ರಕಥೆ ಮಾಡಿದ್ದಾರೆ. ಚಿತ್ರವೀಗ ಬಿಡುಗಡೆಗೆ ಸಿದ್ದವಿದ್ದು, ಸೆನ್ಸಾರ್‌ಗೆ ಹೋಗಲು ಅಣಿಯಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ, ಎನ್. ಕುಮಾರ್ ಅವರು ನಮ್ಮ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ ಎಂದರು.

ನಂತರ ನಿರ್ದೇಶಕ ಶಶಿಧರ್ ಅವರು, ಈ ಚಿತ್ರ 5 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಕೋವಿಡ್ ಸೇರಿ ಹಲವಾರು ಕಾರಣಗಳಿಂದ ಮುಂದೆ ಹೋಗಬೇಕಾಯ್ತು, ಅಡ್ವೆಂಚರಸ್ ಡ್ರಾಮಾದಲ್ಲಿ ಫಿಕ್ಷನಲ್ ಕಥೆಯಿದೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿವೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರದ ಟ್ರೈಲರ್ ನೋಡಿ ಜೀ ನವರು ಒಳ್ಳೆಯ ಮೊತ್ತ ಕೊಟ್ಟು ರೈಟ್ಸ್ ಖರೀದಿಸಿದ್ದಾರೆ. ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಈ ಚಿತ್ರಕ್ಕಿದೆ ಎಂದು ಹೇಳಿದರು.

ನಾಯಕ ಅರುಣ್ ರಾಮ್‌ಪ್ರಸಾದ್ ನಟನೆಗೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ನನಗೆ ಇಡೀ ಸಿನಿಮಾ ಒಂದು ರೀತಿ ಚಾಲೆಂಜಿಂಗ್ ಆಗಿತ್ತು. ಆಗಾಗ ನನ್ನ ತೂಕವನ್ನು ಕಡಿಮೆ, ಹೆಚ್ಚು ಮಾಡಿಕೊಳ್ಳಬೇಕಿತ್ತು, ನನ್ನ ಪಾತ್ರಕ್ಕೆ ರೈಟರ್, ಅಂಡರ್‌ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದ್ದು, ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ ಎಂದು ಹೇಳಿದರು. ವಿತರಕ ಎನ್.ಕುಮಾರ್ ಅವರು, ನಾನು ರಾಮ್ ಪ್ರಸಾದ್ ಆತ್ಮೀಯ ಸ್ನೇಹಿತರು, ನನ್ನ ಮಗ ಹಾಗೂ ಅವರ ಮಗನೂ ಸ್ನೇಹಿತರು, ಫೆಬ್ರವರಿಗೆ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನಿದೆ ಎಂದರು.

ಇದನ್ನೂ ಓದಿ : ಬಳ್ಳಾರಿಯಲ್ಲಿ ಪ್ರಭಾವಿ ರಾಜಕಾರಣಿ ಪುತ್ರನಿಂದ ಸಾವಿರ ಕೋಟಿ ಮೌಲ್ಯದ ಗಣಿ ಲೂಟಿ – ಅಕ್ರಮ ಬಯಲಿಗೆಳೆದ ಡೆಪ್ಯುಟಿ ಡೈರೆಕ್ಟರ್ ದ್ವಿತೀಯಾ ಇ.ಸಿ.. ಕೋರ್ಟ್​ಗೆ ದೂರು!

Btv Kannada
Author: Btv Kannada

Read More