ಆಂಧ್ರಪ್ರದೇಶದಲ್ಲಿ ಭೀಕರ ಕಾರು ಅಪಘಾತ – ಕರ್ನಾಟಕದ ಮೂವರು ಸಾವು!

ಚಿಕ್ಕಬಳ್ಳಾಪುರ :  ಚಾಲಕನ ನಿಯಂತ್ರಣ ತಪ್ಪಿ ಕಾರು ಬಾವಿಗೆ ಬಿದ್ದ ಪರಿಣಾಮ ಕರ್ನಾಟಕದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಪಿಲೇರು-ಟಿ.ಸದುಂ ಮಾರ್ಗದ ಕುರುವಪಲ್ಲಿಯಲ್ಲಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮುತ್ತಕದಹಳ್ಳಿಯ ಲೋಕೇಶ್, ಚಾಂಡ್ರಹಳ್ಳಿಯ ಶಿವಾನಂದ್, ಕೋಲಾರದ ಸುಗಟೂರಿನ ಚಲಪತಿ ಮೃತ ದುರ್ದೈವಿಗಳು.

ಅದೃಷ್ಟವಶಾತ್ ತಿಪ್ಪಾರೆಡ್ಡಿ ಹಾಗೂ ಸುನೀಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆ ಸಂಬಂಧ ಪಿಲೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕನ್ನಡಿಗರನ್ನು ಕೆಣಕಿದ್ದ ಜಿ.ಎಸ್‌ ಸೂಟ್ಸ್‌ ​​ಹೋಟೆಲ್ ಸೀಜ್​​ – ಮಾಲೀಕನಿಗೆ ಪೊಲೀಸರ ಹಂಟಿಂಗ್!

Btv Kannada
Author: Btv Kannada

Read More