ಕನ್ನಡಿಗರನ್ನು ಕೆಣಕಿದ್ದ ಜಿ.ಎಸ್‌ ಸೂಟ್ಸ್‌ ​​ಹೋಟೆಲ್ ಸೀಜ್​​ – ಮಾಲೀಕನಿಗೆ ಪೊಲೀಸರ ಹಂಟಿಂಗ್!

ಬೆಂಗಳೂರು : ಕೋರಮಂಗಲ ಜಿ.ಎಸ್​ ಸೂಟ್ಸ್‌​ ಹೋಟೆಲ್​ನಲ್ಲಿ ನಿನ್ನೆ ಕನ್ನಡಿಗರನ್ನ‌ ನಿಂದಿಸುವ ಡಿಸ್​ಪ್ಲೇ ಬೋರ್ಡ್‌ ಹಾಕಿ ಅವಮಾನಿಸಿರುವಂತಹ ಘಟನೆ ನಡೆದಿತ್ತು. ಇದು ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ.

ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್ ಕೂಡ​ ದಾಖಲಾಗಿದೆ. ಸದ್ಯ ಹೋಟೆಲ್‌ ಮಾಲೀಕ ಕೇರಳದಲ್ಲಿದ್ದು, ಮಾಲೀಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜಿ.ಎಸ್‌ ಸೂಟ್‌ ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಲಾಗಿತ್ತು. ಸ್ಥಳೀಯರು ಅದನ್ನು ಗಮನಿಸಿ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ಹೋಟೆಲ್‌ನ ಈ ನಡೆಗೆ ಕನ್ನಡಿಗರು ಅಸಮಾಧಾನ ಹೊರಹಾಕಿದ್ದರು.‌

ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌ ಅವರು ಹೋಟೆಲ್‌ ಮಾಲೀಕ ಜಮ್‌ಶದ್‌ ಮತ್ತು ಸರ್ಫರಾಜ್‌ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ಮದ್ಯ ಮಾರಾಟಗಾರರಿಗೆ ಬಿಗ್ ಶಾಕ್ – ಲೈಸೆನ್ಸ್ ಶುಲ್ಕ ದಿಢೀರ್ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

Btv Kannada
Author: Btv Kannada

Read More