ಬೆಂಗಳೂರು : ರಾಜ್ಯ ಸರ್ಕಾರ ಇತ್ತೀಚಿಗೆ ಬಿಯರ್, ಐಎಂಎಲ್ ಬೆಲೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಮದ್ಯ ಮಾರಾಟಗಾರರಿಗೂ ಶಾಕ್ ನೀಡಿದೆ. ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಶುಲ್ಕ ದುಪ್ಪಟ್ಟು ಮಾಡಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ವಾರ್ಷಿಕ ಲೈಸೆನ್ಸ್ ಶುಲ್ಕವನ್ನು ಸರ್ಕಾರ ಏಕಾಏಕಿ ಏರಿಕೆ ಮಾಡಿದೆ. ಲೈಸೆನ್ಸ್ ಶುಲ್ಕ ಹೆಚ್ಚಳ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶುಲ್ಕ, ಸೆಸ್ ಸೇರಿ ಬರೋಬ್ಬರಿ ಲೈಸೆನ್ಸ್ ಶುಲ್ಕ ಶೇ. 100 ರಷ್ಟು ಆಗಿದೆ. 9 ವರ್ಷಗಳ ಬಳಿಕ ರಾಜ್ಯ ಸರ್ಕಾರ ಸನ್ನದು ಶುಲ್ಕ ಏರಿಸಿದ್ದು, ಜುಲೈ 1 ರಿಂದಲೇ ರಾಜ್ಯಾದ್ಯಂತ ಪರಿಷ್ಕೃತ ದರ ಜಾರಿಯಾಗಲಿದೆ.
ಮಹಾನಗರ ಪಾಲಿಕೆಗಳ ಲೈಸೆನ್ಸ್ ನವೀಕರಣಕ್ಕೆ 12 ಲಕ್ಷ ರೂ. ಹಾಗೂ ನಗರಸಭೆ ಪ್ರದೇಶದಲ್ಲಿ 8-10 ಲಕ್ಷ ರೂ. ಶುಲ್ಕ ಹೆಚ್ಚಳ ಮಾಡಲಾಗಿದೆ. ಇನ್ನು ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ 3 ಲಕ್ಷ ರೂ.ಗೆ ಹೆಚ್ಚಳ ಮಾಡಿದ್ದು, 500-600 ಹೆಚ್ಚುವರಿ ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿರುವ 13 ಸಾವಿರಕ್ಕೂ ಅಧಿಕ ಲೈಸೆನ್ಸ್‌ಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ.
ಯಾವ್ಯಾವ ಲೈಸೆನ್ಸ್‌ಗೆ ಎಷ್ಟೆಷ್ಟು ಫೀಸ್ ಹೆಚ್ಚಳ ?
- ಬ್ರಿವರಿಯ ಸನ್ನದು ಶುಲ್ಕ 27 ಲಕ್ಷದಿಂದ 54 ಲಕ್ಷ ರೂ.ಗೆ ಹೆಚ್ಚಳ
- ಸಿಎಲ್- 6 (ತಾರಾ ಹೋಟೆಲ್) -9,75,000 – 23,00,000
- ಸಿಎಲ್-7 (ಹೋಟೆಲ್/ಬೋರ್ಡಿಂಗ್) 9,75,000
- ಸಿಎಲ್-9(ಬಾರ್/ರೆಸ್ಟೋರೆಂಟ್) 8,62,000-17,25,000
- ಗೋದಾಮುಗಳ ಶುಲ್ಕ 45 ಲಕ್ಷದಿಂದ 90 ಲಕ್ಷ ರೂ.ಗೆ ಏರಿಕೆ
ಇದನ್ನೂ ಓದಿ : ಒಳ ಮೀಸಲಾತಿ ಸಮೀಕ್ಷೆಗೆ ಹೋದವರಿಗೆ ಜನರ ತರಾಟೆ – ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ದಾಖಲಾತಿ ತೋರಿಸಿ ಎಂದು ಕ್ಲಾಸ್!
