ಒಳ ಮೀಸಲಾತಿ ಸಮೀಕ್ಷೆಗೆ ಹೋದವರಿಗೆ ಜನರ ತರಾಟೆ – ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ದಾಖಲಾತಿ ತೋರಿಸಿ ಎಂದು ಕ್ಲಾಸ್!

ಬೆಂಗಳೂರು : ರಾಜ್ಯದಲ್ಲಿ SC ಸಮುದಾಯದ ಒಳಮೀಸಲಾತಿ ವಿಚಾರ  ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಒಳ ಮೀಸಲಾತಿ ಜಾತಿಗಣತಿ ಸಮೀಕ್ಷೆಗೆ ಬಂದವರಿಗೆ ವ್ಯಕ್ತಿಯೊಬ್ಬ ತೀವ್ರ ತರಾಟೆ ತೆಗೆದು ಕಿರಿಕ್ ಮಾಡಿದ್ದಾನೆ.

ವಿಪಕ್ಷಗಳ ಭಾರಿ ವಿರೋಧಕ್ಕೆ ಕಾರಣವಾಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನಡೆಯುತ್ತಿರುವ ಒಳ ಮೀಸಲಾತಿ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪದಲ್ಲಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ.

ಶಿಕ್ಷಕಿಗೆ ಸಮೀಕ್ಷೆಯ ದಾಖಲಾತಿ ತೋರಿಸಿ ಎಂದು ಪ್ರಶ್ನೆ‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್‌ ಮಾಡುವ ಮೂಲಕ ಕಿರಿಕ್ ಮಾಡಿದ್ದಾನೆ. ಬೆಂಗಳೂರಲ್ಲಿ ಈಗಾಗಲೇ 225 ವಾರ್ಡ್ ಗಳಲ್ಲಿ 10 ಲಕ್ಷ ಮನೆಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು ಸಮೀಕ್ಷೆ ನಡೆಸಲು ಹೋದ ಕೆಲ ಮನೆಗಳಲ್ಲಿ ಕಿರಿಕ್ ಮಾಡಿಲಾಗ್ತಿದೆ. ಇನ್ನು ಸಮೀಕ್ಷೆಗೆ ಬಂದ ಶಿಕ್ಷಕರು ಸಮೀಕ್ಷೆ ಸಂಬಂಧ ಏನೇ ಗೊಂದಲಗಳಿದ್ದರೂ  ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಜೂನ್​ನಲ್ಲಿ ಸ್ಯಾಂಡಲ್​ವುಡ್ ವುಮೆನ್ಸ್ ಸೆಲೆಬ್ರಿಟಿ ಲೀಗ್ – ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಲು ಸಜ್ಜಾದ ಮಹಿಳಾ ಸೆಲೆಬ್ರಿಟಿಸ್!

Btv Kannada
Author: Btv Kannada

Read More