ಜಮ್ಮುಕಾಶ್ಮೀರದ ಮೇಲೆ ಮಿಸೈಲ್ಗಳಿಂದ ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನ್ಕ್ಕೆ ಭಾರತ ಸೇನೆ ತಿರುಗೇಟು ಕೊಟ್ಟಿದೆ. ಅಮೆರಿಕದಿಂದ ಖರೀದಿ ಮಾಡಿದ್ದ ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಹಾಗೂ ಎರಡು JF-17ನ್ನು ಭಾರತದ ಬಲಿಷ್ಠ ವಾಯು ಸೇನಾ ಪಡೆ ಹೊಡೆದುರಳಿಸಿದೆ.
ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್ ನಿನ್ನೆ ಮತ್ತೆ ಬಾಲ ಬಿಚ್ಚಿಲು ಯತ್ನಿಸಿ ಡ್ರೋನ್ ದಾಳಿ ಮಾಡಿತ್ತು. ವಿಮಾನ ನಿಲ್ದಾಣದ ಬಳಿ ಸೇನಾ ನೆಲೆಯನ್ನ ಟಾರ್ಗೆಟ್ ಮಾಡಿದ್ದ ಪಾಕ್, ದಾಳಿಗೆ ಮುಂದಾಗಿತ್ತು. ಆದ್ರೆ ಪಾಕ್ ಡ್ರೋನ್‌ನನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದೆ.
100 ಮಂದಿ ಉಗ್ರರ ಸಂಹಾರದ ಪ್ರತೀಕಾರವಾಗಿ ಪಾಕಿಸ್ತಾನ ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಲು ಮುಂದಾಗಿದೆ. ಆದರೆ ಭಾರತ, ಪಾಕ್ ಡ್ರೋನ್‌ಗಳನ್ನು ಕೂಡ ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ, ಜೈಸಲ್ಮೇರ್, ಪಠಾಣ್‌ಕೋಟ್, ಅಖ್ನೂರ್, ರಾಜೌರಿ,ಪೂಂಚ್, ತಂಗಹಾರ್, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿತ್ತು. ಆದ್ರೆ, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಹಾಗೆಯೇ ಎಫ್-16 ಹೆಸರಿನ ಒಂದು ಫೈಟರ್ ಜೆಟ್ ಹಾಗೂ ಜೆಎಫ್-17 ಹೆಸರಿನ ಎರಡು ಯುದ್ಧ ವಿಮಾನಗಳನ್ನು ಭಾರತದ ವಾಯು ಸೇನೆ ನೆಲಕ್ಕುರುಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಮತ್ತೆ ಭಾರೀ ಪೆಟ್ಟು ಬಿದ್ದಂತೆ ಆಗಿದೆ. ಲಾಹೋರ್ನ ಏರ್ ಡಿಫೆನ್ಸ್ ಸೆಂಟರ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಈಗ ಫೈಟರ್ ಜೆಟ್ಗೂ ಭಾರತ ಸೇನೆ ಬಿಗ್ ಪಂಚ್ ಮಾಡಿ ಯಶಸ್ಸು ಗಳಿಸಿದೆ.
ಇದನ್ನೂ ಓದಿ : ಪಾಕ್ ಮೇಲೆ ಭಾರತ ‘ಸುದರ್ಶನ ಚಕ್ರ’ ಪ್ರಯೋಗ – ಲಾಹೋರ್ ಸೇರಿ ಹಲವು ಪ್ರದೇಶಗಳ ಸೇನಾ ನೆಲೆ ಧ್ವಂಸ!
