ಮುಂಬೈ : ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ವಿರುದ್ಧ ತವರಿನಲ್ಲಿ ಮುಂಬೈ ಇಂಡಿಯನ್ಸ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ ಸಿಕ್ಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಧೋನಿ ಪಡೆ ನೀಡಿದ ಗುರಿ ಬೆನ್ನತ್ತಿದ ಮುಂಬೈ 20 ಓವರ್‌ಗೆ 1 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು.
ಬ್ಯಾಟಿಂಗ್‌ನಲ್ಲಿ ಮುಂಬೈ ಅಬ್ಬರಿಸಿದ್ದು, ಓಪನರ್‌ಗಳಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್, ರೋಹಿತ್ ಶರ್ಮಾ ಸಿಕ್ಸ್, ಫೋರ್‌ಗಳಿಂದ CSK ಬೌಲರ್ ಗಳ ಬೆಂಡೆತ್ತಿದರು. ಈ ಜೋಡಿ 40 ಬಾಲ್‌ಗೆ 63 ರನ್ ಜೊತೆಯಾಟ ಕಲೆಹಾಕಿತು. ಈ ನಡುವೆ ರಿಕೆಲ್ಟನ್ 24 ರನ್ ಗಳಿಸಿ ಔಟಾದರು.
ಆಗ ಹಿಟ್ ಮ್ಯಾನ್‌ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಈ ಜೋಡಿ ಚೆನ್ನೈ ಬೌಲರ್‌ಗಳ ಬೆವರಿಳಿಸಿತು. 54 ಬಾಲ್‌ಗೆ 114 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿ ಮಿಂಚಿದರು. ರೋಹಿತ್ ಶರ್ಮಾ 45 ಬಾಲ್‌ಗೆ 6 ಸಿಕ್ಸ್, 4 ಫೋರ್‌ಗಳೊಂದಿಗೆ 76 ರನ್ ಸಿಡಿಸಿದರು. ಸೂರ್ಯ 30 ಬಾಲ್‌ಗೆ 5 ಸಿಕ್ಸ್, 6 ಫೋರ್‌ಗಳೊಂದಿಗೆ 68 ರನ್ ಗಳಿಸಿದರು. ಇಬ್ಬರೂ ಔಟಾಗದೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ : ಬಿಜೆಪಿಯ 18 ಶಾಸಕರ ಅಮಾನತು ಪ್ರಕರಣ – ಇಂದು ಸ್ಪೀಕರ್ ಖಾದರ್ ಭೇಟಿಯಾಗಲಿರುವ ಆರ್. ಅಶೋಕ್!
