ಬೆಂಗಳೂರು : ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಬೀದಿ ಕಾಮುಕ ಅರೆಸ್ಟ್!

ಬೆಂಗಳೂರು : ಶಿವಾಜಿನಗರದ ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ ಕಾರ್ತಿಕ್ ಎಂಬ ವ್ಯಕ್ತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಏಪ್ರಿಲ್ 13 ರಂದು ರಾತ್ರಿ 10:30 ಸುಮಾರಿಗೆ ನಡೆದಿದ್ದು, ಊಟ ಮುಗಿಸಿ ಎರಡನೇ ಮಹಡಿಯ ತನ್ನ ಮನೆಗೆ ಮಲಗಲು ತೆರಳುತ್ತಿದ್ದ ಮಹಿಳೆಯೊಬ್ಬರ ಮುಂದೆ ಎದುರು ಮನೆಯಲ್ಲಿ ವಾಸಿಸುವ ಕಾರ್ತಿಕ್ ಅನುಚಿತವಾಗಿ ವರ್ತಿಸಿದ್ದಾನೆ. ಆತನು ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಪ್ರಶ್ನಿಸಿದ ಮಹಿಳೆಯ ಪತಿಯ ಮೇಲೆ ಕಾರ್ತಿಕ್ ಹಲ್ಲೆ ನಡೆಸಿದ್ದಾನೆ. ಜಗಳವನ್ನು ಬಿಡಿಸಲು ಮುಂದಾದ ಸ್ಥಳೀಯರ ಮೇಲೂ ಆತ ದಾಳಿ ಮಾಡಿದ್ದಾನೆ.

ವಿಷಯ ತೀವ್ರಗೊಂಡಂತೆ, ಕಾರ್ತಿಕ್ ಎರಡನೇ ಮಹಡಿಯಿಂದ ಹಾಲೋಬ್ಲಾಕ್‌ಗಳು ಮತ್ತು ಹೂವಿನ ಕುಂಡಗಳನ್ನು ಕೆಳಗಿರುವವರ ಮೇಲೆ ಎಸೆದಿದ್ದಾನೆ. ಈ ದಾಳಿಯಿಂದ ಏಳು ಜನರಿಗೆ ಗಾಯಗಳಾಗಿವೆ. ಜಗಳದ ವೇಳೆ ಬುದ್ಧಿಮಾತು ಹೇಳಲು ಮುಂದಾದವರ ಮೇಲೂ ಕಾರ್ತಿಕ್ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಶಿವಾಜಿನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ : ಕಗ್ಗಲೀಪುರದಲ್ಲಿ ಬಿಎಂಟಿಸಿಯನ್ನು ಅಡ್ಡಗಟ್ಟಿದ ಆನೆ – ತಬ್ಬಿಬ್ಬಾದ ಪ್ರಯಾಣಿಕರು.. ವಿಡಿಯೋ ವೈರಲ್​!

 

 

Btv Kannada
Author: Btv Kannada

Read More