ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ₹90.01 ಕ್ಕೆ ಕುಸಿದಿದೆ. 2014ರಲ್ಲಿ ₹60 ರಷ್ಟಿದ್ದ ರೂಪಾಯಿ ಮೌಲ್ಯವು ಈಗ ₹90 ಗಡಿ ದಾಟಿದೆ. ಜಿಡಿಪಿ ಬೆಳವಣಿಗೆ ಉತ್ತಮವಾಗಿದ್ದರೂ, ರೂಪಾಯಿ ಕುಸಿತವು ಆರ್ಥಿಕತೆಗೆ ಪೆಟ್ಟು ನೀಡುವ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ನರೇಂದ್ರ ಮೋದಿ ಅವರ ಸರ್ಕಾರ ಆಡಳಿತದಲ್ಲಿದ್ದಾಗಲೇ ಭಾರತದ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಡಾಲರ್ಗೆ ₹90.01 ರ ಗಡಿ ದಾಟಿರುವುದು ದೇಶದ ಆರ್ಥಿಕ ವಲಯದಲ್ಲಿ ತೀವ್ರ ತಳಮಳ ಸೃಷ್ಟಿಸಿದೆ. ಡಾಲರ್ ಆರ್ಭಟಕ್ಕೆ ಭಾರತದ ರೂಪಾಯಿ ಠುಸ್ ಪಟಾಕಿಯಂತಾಗಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಈ ದಾಖಲೆಯ ಕುಸಿತ ಕಂಡಿರುವುದು, ಆರ್ಥಿಕ ಬೆಳವಣಿಗೆ (ಜಿಡಿಪಿ)ಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೂ, ದೇಶದ ಕರೆನ್ಸಿ ಮೌಲ್ಯ ಏಕೆ ಕುಸಿಯುತ್ತಿದೆ.
2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ 1 ಡಾಲರ್ಗೆ 60 ಇದ್ದ ರೂಪಾಯಿ ಮೌಲ್ಯವು 11 ವರ್ಷಗಳಲ್ಲಿ ₹90 ಗಡಿ ದಾಟಿ, ಶೇ. 50ರಷ್ಟು ಕುಸಿತ ಕಂಡಿದೆ. ಈ ವೇಗದ ಕುಸಿತವು ಆರ್ಥಿಕ ತಜ್ಞರಿಗೆ ಹೊಸ ತಲೆನೋವು ತಂದಿದ್ದು, ಡಾಲರ್ ಪಾರುಪತ್ಯ ತಗ್ಗಿಸಲು ಮತ್ತು ರೂಪಾಯಿ ಮೌಲ್ಯ ಸ್ಥಿರಗೊಳಿಸಲು ಮೋದಿ ಸರ್ಕಾರ ಹಾಗೂ ಆರ್‌ಬಿಐ ಜಾರಿಗೊಳಿಸಿದ ನೀತಿಗಳು ಫಲ ನೀಡಿಲ್ಲ.
ರೂಪಾಯಿ ಕುಸಿತವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಜಿಡಿಪಿ ಬೆಳವಣಿಗೆಯ ಸುಳ್ಳು ಭರವಸೆಗಳ ನಡುವೆ, ರೂಪಾಯಿ ಕುಸಿತದಿಂದ ಭಾರತದ ಆರ್ಥಿಕತೆ ಹಾಳಾಗಿದೆ ಎಂದು ಅವು ಆರೋಪಿಸಿದ್ದು, ಈ ನಿರಂತರ ಕುಸಿತವು ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ : ಕರ್ನಾಟಕ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಪೊಲೀಸಪ್ಪ – 11 ಲಕ್ಷ ಕದ್ದು ಪತ್ನಿಗೆ ಗೋಲ್ಡ್ ಗಿಫ್ಟ್ ಕೊಟ್ಟ ಹೆಡ್ ಕಾನ್ಸ್ಟೇಬಲ್!







