ದೆಹಲಿ ಕಾರು ಬಾಂಬ್ ಸ್ಫೋಟ, ಸಾವಿನ ಸಂಖ್ಯೆ 12ಕ್ಕೆ ಏರಿಕೆ – ವೈದ್ಯೆ ಶಹೀನ್‌ಗೆ ಉಗ್ರ ಸಂಘಟನೆ ಲಿಂಕ್?

ದೆಹಲಿ : ದೆಹಲಿಯಲ್ಲಿ ಸಂಭವಿಸಿದ ಭೀಕರ ಕಾರು ಬಾಂಬ್ ಸ್ಫೋಟದ ನಂತರದ ಆತಂಕಕಾರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಫೋಟವಾಗುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದ ಜನ ಭಯಭೀತರಾಗಿ ಜೀವ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇಡೀ ಮಾರುಕಟ್ಟೆ ನಡುಗುವಂತೆ ಮಾಡಿದ ಈ ಸ್ಫೋಟದ ಭೀಕರತೆ ಈಗ ಬಹಿರಂಗಗೊಂಡಿದೆ.

 

ಈ ಪ್ರಕರಣದ ತನಿಖೆ ವೇಳೆ, ಸ್ಫೋಟದ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಒಬ್ಬ ವೃದ್ಧ ವೈದ್ಯೆಯೊಂದಿಗೆ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಶಂಕಿತೆ ಡಾ. ಶಹೀನ್ ವೃತ್ತಿಯಲ್ಲಿ ವೈದ್ಯೆಯಾಗಿದ್ದಾಳೆ. ಆದರೆ, ಈಕೆಗೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನೊಂದಿಗೆ ಸಂಬಂಧವಿದೆ.  ಡಾ. ಶಹೀನ್ ಜಮಾತ್-ಉಲ್-ಮೋಮಿನತ್ ಎಂಬ ಮಹಿಳಾ ವಿಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಇದರ ನೇತೃತ್ವವನ್ನು ಮುಖ್ಯಸ್ಥ ಮಸೂದ್ ಅಜರ್ ಸಹೋದರಿ ಸಾರಿಯಾ ಅಜರ್ ವಹಿಸಿದ್ದಾಳೆ. ಈ ಮೂಲಕ ವೈದ್ಯೆಯೊಬ್ಬಳು ಭಯೋತ್ಪಾದಕಿ ಪ್ರವೃತ್ತಿ ಬೆಳೆಸಿಕೊಂಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಫೋಟಕ್ಕೆ ಬಳಸಿದ ಕಾರಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಅದರ ಮೂಲ ಮಾಲೀಕ ಮೊಹಮ್ಮದ್​ ಸಲ್ಮಾನ್​ ನನ್ನು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಲ್ಮಾನ್, ಸ್ಫೋಟಕ್ಕೆ ಬಳಕೆಯಾದ I-20 ಕಾರನ್ನು ತಾನು ಹರಿಯಾಣದ ಓಕ್ಲಾ ಪ್ರದೇಶದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾಗಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಈ ಕಾರು ಸಲ್ಮಾನ್ ನಂತರ ಓಕ್ಲಾದ ವ್ಯಕ್ತಿಯಿಂದ ಅಂಬಾಲಾದ ದೇವೇಂದ್ರ  ಎಂಬ ಮತ್ತೊಬ್ಬ ವ್ಯಕ್ತಿಗೆ ಮಾರಾಟವಾಗಿರುವುದು ತಿಳಿದುಬಂದಿದೆ. ತನಿಖೆಯ ಆರಂಭಿಕ ಹಂತದಲ್ಲಿ, ಸ್ಫೋಟವಾದ I-20 ಕಾರು ನಾಲ್ವರು ವ್ಯಕ್ತಿಗಳ ಕೈಗಳಿಗೆ ಮಾರಾಟವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ದೆಹಲಿಯ ಕೆಂಪುಕೋಟೆ  ಬಳಿ ನಿನ್ನೆ ಸಂಭವಿಸಿದ ಭೀಕರ I-20 ಕಾರು ಸ್ಫೋಟದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಆತಂಕ ಹೆಚ್ಚಿಸಿದೆ. ಈ ಭೀಕರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದೆ. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ 17ಕ್ಕೂ ಹೆಚ್ಚು ಜನರಿಗೆ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ : ದೆಹಲಿ ಸ್ಫೋಟದ ಹಿಂದೆ ಇರೋರನ್ನ ಬಿಡೋದಿಲ್ಲ – ಪ್ರಧಾನಿ ಮೋದಿ ವಾರ್ನಿಂಗ್!

Btv Kannada
Author: Btv Kannada

Read More