ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಕಾರ್ ಸ್ಪೋಟಕಕ್ಕೆ 11 ಜನ ಬಲಿಯಾಗಿದ್ದು, 30ಕ್ಕೂ ಹೆಚ್ಚು ಜನಕ್ಕೆ ಗಂಭೀರ ಗಾಯಗಳಾಗಿವೆ. ಈ ಭೀಕರ ಕಾರು ಸ್ಫೋಟವು ರಾಜಧಾನಿಯಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ದೆಹಲಿ ಕಾರು ಸ್ಫೋಟದ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, ಈ ಸ್ಫೋಟದ ಹಿಂದೆ ಇರೋರನ್ನ ಬಿಡೋದಿಲ್ಲ, ಪಿತೂರಿ ಹಿಂದೆ ಇರೋರಿಗೆ ತಕ್ಕಶಿಕ್ಷೆ ನೀಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ಭೂತಾನ್ ರಾಜಧಾನಿ ಥಿಂಪುವಿನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸ್ಪೋಟಕಕ್ಕೆ ಕಾರಣವಾದವರನ್ನು ಯಾವ ಕಾರಣಕ್ಕೂ ಬಿಡಲ್ಲ. ಸ್ಪೋಟದಲ್ಲಿ ಮೃತಪಟ್ಟ ಸಂತ್ರಸ್ತರ ಪರ ಇಡೀ ದೇಶ ನಿಂತಿದೆ, ಷಡ್ಯಂತ್ರ ಮಾಡಿದವರ ಮೂಲಕ್ಕೇ ಹೋಗುತ್ತೇವೆ ಎಂದು ಕಿಡಿ ಕಾರಿದ್ದಾರೆ.
ತನಿಖಾ ತಂಡಗಳು ಷಡ್ಯಂತ್ರವನ್ನು ಶೀಘ್ರವಾಗಿ ಭೇದಿಸುತ್ತವೆ ಎಂದು ಭೂತಾನ್ನಲ್ಲಿ ನಿಂತು ಮೋದಿ ಉಗ್ರರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಬಳಿಕ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸ್ಫೋಟದ ಹಿಂದೆ ಇರೋರನ್ನ ಖಂಡಿತ ಬಿಡಲ್ಲ. ಅವರಿಗೆ ತಕ್ಕ ಶಿಕ್ಷೆ ಕಾದಿದೆ, ತಕ್ಕ ಶಾಸ್ತಿ ಮಾಡ್ತೀವಿ, ಅವರನ್ನು ಕಟಕಟೆಗೆ ತಂದು ನಿಲ್ಲಿಸ್ತೀವಿ ಎಂದು ದೇಶದ ಜನರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ತಿರುವೀರ್ – ಐಶ್ವರ್ಯಾ ರಾಜೇಶ್ ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿ ಮುಹೂರ್ತ – ಕನ್ನಡ ಸೇರಿ 4 ಭಾಷೆಗಳಲ್ಲಿ ಸಿನಿಮಾ ತೆರೆಗೆ!







