ಬೆಂಗಳೂರು : ಇತ್ತೀಚೆಗೆ ಸೈಬರ್ ವಂಚಕರ ಕಿರುಕುಳ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಉಪೇಂದ್ರ, ಸಂಸದರ ಪತ್ನಿ ಬೆನ್ನಲ್ಲೇ ಇದೀಗ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಸೈಬರ್ ವಂಚಕರ ಕಾಟ ಎದುರಾಗಿದೆ. ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತ ಹೇಳಿ ಖದೀಮ ಸುಧಾಮೂರ್ತಿ ಅವರಿಗೆ ವಂಚಿಸಲು ಯತ್ನಿಸಿದ್ದಾನೆ.

ಸೆ.5ರಂದು ವಂಚಕ ಸುಧಾಮೂರ್ತಿ ಅವರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದು, ನಿಮ್ಮ ನಂಬರ್ ಆಧಾರ್ಗೆ ಲಿಂಕ್ ಮಾಡದೆ ನೋಂದಾಯಿಸಲಾಗಿದೆ ಎಂದು ಸೈಬರ್ ಖದೀಮ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಿದ್ದಾನೆ. ನಂತರ ನಿಮ್ಮ ನಂಬರ್ನಿಂದ ಅಶ್ಲೀಲ ವಿಡಿಯೋ ಕಳಿಸಲಾಗ್ತಿದೆ, ಅದನ್ನ ನಿಲ್ಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದಾನೆ.

ಕರೆ ಬಳಿಕ ಟ್ರೂಕಾಲ್ನಲ್ಲಿ ಆ ನಂಬರ್ ಚೆಕ್ ಮಾಡಿದಾಗ ಟೆಲಿಕಾಂ ಡೆಪಾರ್ಟ್ಮೆಂಟ್ ಅಂತ ಬಂದಿದ್ದು, ಸೈಬರ್ ವಂಚಕರ ಟ್ರ್ಯಾಪ್ಗೆ ಒಳಗಾಗದೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ : ಅನೈತಿಕ ಸಂಬಂಧ ಶಂಕೆ – ಮಕ್ಕಳೆದುರೇ ಹೆಂಡ್ತಿಯನ್ನು ಚಾಕು ಇರಿದು ಕೊಂದ ಪತಿ!







