ತನ್ನ ಹೆಂಡತಿಗೆ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಆಕೆಗೆ ಚಾಕು ಇರಿದು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ ನಡೆದಿದೆ. 28 ವರ್ಷದ ಚಂಚಲ್ ಶರ್ಮಾ ಕೊಲೆಯಾದ ಮಹಿಳೆ. ಸೋನು ಶರ್ಮಾ ಹತ್ಯೆಗೈದ ಆರೋಪಿ.
ಚಂಚಲ್ ಶರ್ಮಾ ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಕೆಲಸ ಬಿಡುವಂತೆ ಗಂಡ ಒತ್ತಾಯ ಮಾಡಿದ್ದ. ಆದರೆ ಮಹಿಳೆ ಕುಟುಂಬದ ನಿರ್ವಹಣೆಗಾಗಿ ಕೆಲಸ ಬಿಡಲು ನಿರಾಕರಿಸಿದ್ದಳು. ಇದೇ ವಿಚಾರವಾಗಿ ಸೋನು, ಪತ್ನಿ ಜೊತೆ ಭಾನುವಾರ ಗಲಾಟೆ ಮಾಡಿದ್ದ.
ಬಳಿಕ ಮುಖವನ್ನು ಬಟ್ಟೆಯಿಂದ ಮುಚ್ಚಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಕೆಯ ಕಿರುಚಾಟ ಕೇಳಿ ಏಳು ವರ್ಷದ ಮಗಳು ಮತ್ತು ಐದು ವರ್ಷದ ಮಗ ಎದ್ದು ತಪ್ಪಿಸಲು ಯತ್ನಿಸಿದ್ದರು. ಆದರೆ ಅವರನ್ನು ದೂರ ತಳ್ಳಿ ಹತ್ಯೆ ಮಾಡಿದ್ದ. ಕೊಲೆಗೈದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ರೆಬೆಲ್ ಸ್ಟಾರ್ ಅಂಬರೀಶ್ಗೆ ಕರ್ನಾಟಕ ರತ್ನ ನೀಡಿ – ಫಿಲ್ಮ್ ಚೇಂಬರ್‌ಗೆ ಅಭಿಮಾನಿಗಳಿಂದ ಮನವಿ!







