ರೆಬೆಲ್ ಸ್ಟಾರ್ ಅಂಬರೀಶ್​ಗೆ ಕರ್ನಾಟಕ ರತ್ನ ನೀಡಿ – ಫಿಲ್ಮ್ ಚೇಂಬರ್‌ಗೆ ಅಭಿಮಾನಿಗಳಿಂದ ಮನವಿ!

ಬೆಂಗಳೂರು : ಕನ್ನಡ ಚಿತ್ರರಂಗದ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಅಂತಾ ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಅಂಬರೀಶ್ ಅಭಿಮಾನಿ ಸಂಘ ಫಿಲ್ಮ್ ಚೇಂಬರ್‌ಗೆ ಮನವಿ ಮಾಡಿದೆ.

ರಾಜ್ಯಾಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರು, ಕಲಾವಿದೆ ಶಶಿಕಲಾ, ನಿರ್ಮಾಪಕ ರಾಮಮೂರ್ತಿ, ಧರ್ಮರಾಯ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಂಜೇಗೌಡ, ಬೆಂಗಳೂರು ಜಿಲ್ಲಾ ಅಂಬರೀಶ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಸೇರಿ ಹಲವರು ಭಾಗಿಯಾಗಿದ್ದರು.

ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮನವಿ ಸ್ವೀಕರಿಸಿ ಈ ಬಗ್ಗೆ ನಾವು ಸಿಎಂ ಗಮನಕ್ಕೆ ತರುತ್ತೇವೆ. ಡಾ.ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ನೀಡುವ ದಿನವೇ ಅಂಬರೀಶ್ ಅವರಿಗೂ ನೀಡುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

ಅಂಬರೀಶ್ ಅವರು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಸಲ್ಲಿಸಿದ ಸೇವೆಯನ್ನ ಗುರುತಿಸಿ ಅವರಿಗೂ ಕರ್ನಾಟಕ ರತ್ನ ಘೋಷಣೆ ಮಾಡಬೇಕು. ವಿಷ್ಣುವರ್ಧನ್ ಅವರ ಕುಚಿಕು ಗೆಳೆಯರಾಗಿದ್ದ ಅಂಬರೀಶ್ ಅವರಿಗೂ ಗೆಳೆಯ ವಿಷ್ಣುವರ್ಧನ್ ಅವರಿಗೆ ಗೌರವ ಪ್ರದಾನದ ದಿನವೇ ರೆಬೆಲ್ ಸ್ಟಾರ್ ಅವರಿಗೂ ಕರ್ನಾಟಕ ರತ್ನ ನೀಡಬೇಕು ಎಂದು ಅಭಿಮಾನಿಗಳು ಕೋರಿದ್ದಾರೆ.

ಇದನ್ನೂ ಓದಿ : ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಓರ್ವ ಸಾವು!

Btv Kannada
Author: Btv Kannada

Read More