ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಓರ್ವ ಸಾವು!

ಕೋಲಾರ : ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಬಳಿ ನಡೆದಿದೆ. ರಾತೇನಹಳ್ಳಿ ಮೂಲದ 46 ವರ್ಷದ ವೆಂಕಟರೆಡ್ಡಿ ಮೃತ ದುರ್ದೈವಿ.

ಕೇಬಲ್ ಆಪರೇಟರ್ ಆಗಿದ್ದ ವೆಂಕಟರೆಡ್ಡಿ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಬೋಯಲೂರು ಮೂಲದ 22 ವರ್ಷದ ಅಂಬರೀಶ್ ಎಂಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​​ನಲ್ಲಿ ಗ್ರೇಟ್ ರಾಬರಿ – ಹಾಡಹಗಲೇ ಮನೆಗೆ ನುಗ್ಗಿ ಒಂದೂವರೆ ಕೋಟಿ ಲೂಟಿ!

Btv Kannada
Author: Btv Kannada

Read More