ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೀಮಾತೀರದ ಚಡಚಣ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಜಾಲಹಳ್ಳಿ ಕ್ರಾಸ್ನಿಂದ ವ್ಯಕ್ತಿಯೊಬ್ಬನನ್ನ ಕಿಡ್ನಾಪ್ ಮಾಡಿ ಕರೆದೊಯ್ದಿದ್ದ ಚಡಚಣ ಗ್ಯಾಂಗ್ ಹಂತಕರು, ಆತನ ಬಳಿಯಿಂದ 5 ಸಾವಿರ ಹಣ ಕಿತ್ತುಕೊಂಡಿತ್ತು. ಅಷ್ಟೆ ಅಲ್ಲದೇ, ಆನ್ ಲೈನ್ನಲ್ಲಿ 1 ಲಕ್ಷ ಟ್ರಾನ್ಫರ್ ಮಾಡಿಕೊಳ್ಳೋಕೆ ಗ್ಯಾಂಗ್ ಮುಂದಾಗಿತ್ತು. ನಂತರ ಹಂತಕರು ವ್ಯಕ್ತಿಯನ್ನ ದಾಬಸ್ಪೇಟೆ ಬಳಿ ಬಿಟ್ಟು ಎಸ್ಕೇಪ್ ಆಗಿದ್ದರು.
ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳ ಹುಡುಕಾಟ ಶುರು ಮಾಡಿದ್ದ ಪೊಲೀಸರು, ಇದೀಗ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಆರೋಪಿಗಳನ್ನು ಲಾಕ್ ಮಾಡಿದ್ದಾರೆ. ಈ ವೇಳೆ ಆರೋಪಿಗಳ ಬಳಿಯಿಂದ ಪಿಸ್ತೂಲು ಹಾಗೂ ಲಾಂಗ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ತನಿಖೆ ವೇಳೆ ಆರೋಪಿಗಳು ಪಿಸ್ತೂಲನ್ನು ಪಿಂಟ್ಯಾ ಗ್ಯಾಂಗ್ ಬಳಿ ಖರೀದಿ ಮಾಡಿರುವ ಬಗ್ಗೆ ಸ್ಪೋಟಕ ಅಂಶವನ್ನು ಬಾಯ್ಬಿಟ್ಟಿದ್ದಾರೆ.

ಭೀಮಾತೀರದ ಹಂತಕ ಕುಖ್ಯಾತ ಪ್ರವೀಣ್ @ಪಿಂಟ್ಯಾ ಬಳಿ ಪಿಸ್ತೂಲು ಖರೀದಿ ಮಾಡಿದ್ದ ಹಂತಕರು, ಬೆಂಗಳೂರಿನಲ್ಲಿ ಕೆಲ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ಬಂದಿದ್ದರು. ಇದೀಗ ಹಲವು ಟಾರ್ಗೆಟ್ ವಿಚಾರವನ್ನು ಕನಕನ ಗ್ಯಾಂಗ್ ಬಾಯ್ಬಿಟ್ಟಿದೆ. ಅದೇ ರೀತಿ ಜೈಲಿನಲ್ಲಿರುವ ಕೆಲ ಹಂತಕರ ವಿಚಾರಣೆಗೂ ಪೊಲೀಸರು ಮುಂದಾಗಿದ್ದಾರೆ. ಇನ್ನೂ ಜೈಲಿನಿಂದಲೇ ಪಿಸ್ತೂಲು ಕನಕನ ಕೈಗೆ ಬಂತಾ ಎಂಬ ಅನುಮಾನಗಳು ಶುರುವಾಗಿದ್ದು, ಈ ಹಿನ್ನೆಲೆ ಬಾಡಿ ವಾರೆಂಟ್ ಮೂಲಕ ಕೆಲ ಹಂತಕರನ್ನ ಪೊಲೀಸರು ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ : ಕಾಂತಾರ ಲೋಕದಲ್ಲಿ ರಿಷಬ್ ಶೆಟ್ರ ಅಬ್ಬರ.. ಟ್ರೈಲರ್ ರಿಲೀಸ್ ಬೆನ್ನಲ್ಲೇ ಮಹತ್ವದ ಸುದ್ದಿಗೋಷ್ಠಿ ಕರೆದ ಚಿತ್ರತಂಡ!







