ಕಾಂತಾರ ಲೋಕದಲ್ಲಿ ರಿಷಬ್ ಶೆಟ್ರ ಅಬ್ಬರ.. ಟ್ರೈಲರ್ ರಿಲೀಸ್​ ಬೆನ್ನಲ್ಲೇ ಮಹತ್ವದ ಸುದ್ದಿಗೋಷ್ಠಿ ಕರೆದ ಚಿತ್ರತಂಡ!

ಕೋಟ್ಯಂತರ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿದ ‘ಕಾಂತಾರ’ ಚಿತ್ರದ ಮುಂದಿನ ಭಾಗ, ‘ಕಾಂತಾರ ಚಾಪ್ಟರ್​​ 1’ರ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಈ ದಸರಾ ಹಬ್ಬಕ್ಕೆ, ಅಂದ್ರೆ ಅಕ್ಟೋಬರ್ 2ರಂದು ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದ್ದು, ಅದರ ಮುಂಚೆಯೇ ಇದೀಗ ಟ್ರೈಲರ್ ಮೂಲಕ ರಿಷಬ್ ಶೆಟ್ಟಿ ದೊಡ್ಡ ಸುನಾಮಿಯನ್ನೇ ಎಬ್ಬಿಸಿದ್ದಾರೆ.

<iframe width="560" height="315" src="https://www.youtube.com/embed/TMQUFhWm8C0?si=y-jsMN2twa6gYqVR" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>

ಟ್ರೈಲರ್ ನೋಡಿದ ಪ್ರತಿಯೊಬ್ಬರಿಗೂ ಮೈ ಜುಮ್ಮೆನ್ನುವುದು ಗ್ಯಾರಂಟಿ. ಇದು ಟ್ರೈಲರ್ ಅಲ್ಲ, ಬದಲಿಗೆ ದಂತಕಥೆಯ ಹಿಂದಿನ ಕಥೆಯ ಒಂದು ಮಹಾಕಾವ್ಯದ ಝಲಕ್. ಹಳ್ಳಿಯ ಸೊಗಡು, ಆಚರಣೆಗಳು, ನಂಬಿಕೆ ಮತ್ತು ಮ್ಯಾಜಿಕ್ ಎಲ್ಲವನ್ನೂ ಟ್ರೈಲರ್‌ನಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಪ್ರತಿ ಫ್ರೇಮ್ ಕೂಡ ರಿಚ್ ಆಗಿದ್ದು, ಪ್ರೇಕ್ಷಕರನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ.

ಇದೀಗ ಕಾಂತಾರ ಚಾಪ್ಟರ್ 1 ಟ್ರೈಲರ್​ ರಿಲೀಸ್ ಬೆನ್ನಲ್ಲೇ ಇಂದು ಸಂಜೆ 5.30ಕ್ಕೆ ಬೆಂಗಳೂರಿನ ಲಲಿತ್​​ ಅಶೋಕ್​​​ ಹೋಟೆಲ್​​ನಲ್ಲಿ ಚಿತ್ರತಂಡ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಸಿನಿಮಾದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ನಟ ರಿಷಭ್​ ಶೆಟ್ಟಿ, ಹೊಂಬಾಳೆ ಸಂಸ್ಥೆಯ ಮುಖ್ಯಸ್ಥ ವಿಜಯ ಕಿರಗಂದೂರು ಸೇರಿ ಚಿತ್ರ ತಂಡದ ಅನೇಕ ಕಲಾವಿದರು ಭಾಗವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಟ್ರೈಲರ್ ರಿಲೀಸ್.. ಥಿಯೇಟರ್​ನಲ್ಲಿ ಮತ್ತೊಮ್ಮೆ ಗೂಸ್​ಬಂಪ್ಸ್ ಪಕ್ಕಾ!

 

Btv Kannada
Author: Btv Kannada

Read More