ಹೊಂಬಾಳೆ ಫಿಲಂಸ್ ನಿಮಾರ್ಣದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡಿಗರು ಸೇರಿದಂತೆ ಅಪಾರ ಸಂಖ್ಯೆ ಭಾರತೀಯ ಚಿತ್ರಪ್ರೇಮಿಗಳ ಮನಸ್ಸು ಗೆದ್ದಿದೆ. ರಿಷಬ್ ಶೆಟ್ಟಿ ದೃಶ್ಯ ವೈಭವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದು, ಟ್ರೈಲರ್ ನೋಡಿದ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ತೆಲುಗಿನಲ್ಲಿ ಕಾಂತಾರ ಚಾಪ್ಟರ್ 1 ಟ್ರೈಲರ್ ಅನ್ನು ಡಾರ್ಲಿಂಗ್ ಪ್ರಭಾಸ್ ರಿಲೀಸ್ ಮಾಡಿದ್ದಾರೆ. ಅದರಂತೆ ಮಲಯಾಳಂ ಭಾಷೆಯ ಟ್ರೈಲರ್ ಅನ್ನು ನಟ ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದಾರೆ. ಆದರೆ ಕನ್ನಡದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಅನ್ನು ಕನ್ನಡ ಜನತೆಯೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಕಾಂತಾರ ಸಿನಿಮಾಗೆ ದೊಡ್ಡ ಯಶಸ್ಸು ಕೊಟ್ಟ ಹಿನ್ನೆಲೆಯಲ್ಲಿ ಕನ್ನಡಿಗರಿಂದಲೇ ಕಾಂತಾರ ಪ್ರೀಕ್ವೆಲ್ ರಿಲೀಸ್ ಮಾಡಿಸಲಾಯಿತು. ಇದರ ಜೊತೆಗೆ ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ ಎಂದು ಚಿತ್ರತಂಡ ಹೇಳಿರುವುದು ತುಂಬಾ ವಿಶೇಷ ಎನಿಸಿದೆ. ಇನ್ನು ತಮಿಳಿನಲ್ಲಿ ಕಾಂತಾರ ಪ್ರೀಕ್ವೆಲ್ ಟ್ರೈಲರ್ ಅನ್ನ ನಟ ಶಿವಕಾರ್ತಿಕೇಯನ್ ಅವರು ಬಿಡುಗಡೆ ಮಾಡಿದ್ದಾರೆ. ಹಾಗೇ ಬಾಲಿವುಡ್ ಸಿನಿ ರಂಗದಲ್ಲಿ ಬಿಗ್ ಸ್ಟಾರ್ ಹೃತಿಕ್ ರೋಷನ್ ಹಿಂದಿ ವರ್ಷಿನ್ ಟ್ರೈಲರ್ ಅನ್ನ ರಿಲೀಸ್ ಮಾಡಿದ್ದಾರೆ.

ಸದ್ಯ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕಾಂತಾರ ಪ್ರೀಕ್ವೆಲ್ ಮೂವಿ ಟ್ರೈಲರ್ನಿಂದ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಇದೇ ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಅಕ್ಟೋಬರ್ 2 ರಂದು ಸಾವಿರಾರು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿರುವ ಕಾಂತಾರ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು 2500 ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಈ ಸಿನಿಮಾಗೆ “ದಿ ಲಯನ್ ಕಿಂಗ್’, ‘ಮಿಷನ್ ಇಂಪಾಸಿಬಲ್’ನಂಥಹ ದೊಡ್ಡ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡಿದ ಎಂಪಿಸಿ ಟೀಂ ವಿಎಫ್‌ಎಕ್ಸ್ ಹಾಗೂ ಸಿಜಿಐ ಮಾಡಿದೆ. ಕನ್ನಡ ಗಟ್ಟಿ ಕಥೆಯೊಂದಿಗೆ ತಾಂತ್ರಿಕತೆಯಲ್ಲೂ ಕಾಂತಾರ ಅಧ್ಯಾಯ 1 ಭಾರೀ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ : ಲೀವಿಂಗ್ ಟುಗೆದರ್ ಕಿರಿಕ್ – ಶೀಲ ಶಂಕಿಸಿ ಯುವತಿಗೆ ಚಾಕು ಇರಿದ ಪ್ರಿಯಕರ!







