ಮಾಸ್ಕೋ : ರಷ್ಯಾದಲ್ಲಿ ಮತ್ತೆ ಭಾರೀ ಭೂಕಂಪನ ಸಂಭವಿಸಿದೆ. ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದ ಕರಾವಳಿಯಲ್ಲಿ ಶುಕ್ರವಾರ ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ಹೊರಡಿಸಿದ್ದಾರೆ.

ಕಮ್ಚಟ್ಕಾದಿಂದ ಪೂರ್ವಕ್ಕೆ 128 ಕಿಲೋಮೀಟರ್ (80 ಮೈಲು) ದೂರದಲ್ಲಿ ಮತ್ತು 10 ಕಿಲೋಮೀಟರ್ ಆಳದಲ್ಲಿ ಎರಡೆರಡು ಬಾರಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ರಷ್ಯಾದ ಭೂಕಂಪಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗಿದ್ದು, ಮನೆಗಳಲ್ಲಿನ ಪೀಠೋಪಕರಣಗಳು, ವಸ್ತುಗಳು ಅಲುಗಾಡುತ್ತಿರುವ ಹಾಗೂ ಪಾರ್ಕ್ ಮಾಡಿದ ಕಾರುಗಳು ಹಿಂದಕ್ಕೆ ಮತ್ತು ಮುಂದಕ್ಕೆ ತೂಗಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ. ಈ ದೃಶ್ಯಗಳು ಜನರಲ್ಲಿ ಭಯವನ್ನು ಹೆಚ್ಚಿಸಿವೆ.

ಜುಲೈನಲ್ಲಿ ಈ ಕಮ್ಚಟ್ಕಾ ಪ್ರದೇಶದ ಕರಾವಳಿಯಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪವು ಸಂಭವಿಸಿತ್ತು. ಪರಿಣಾಮವಾಗಿ ಕರಾವಳಿ ಹಳ್ಳಿಯ ಒಂದು ಭಾಗ ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿತ್ತು.
ಇದನ್ನೂ ಓದಿ : ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ – ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದಾಡಿಕೊಂಡ ಸ್ಟೂಡೆಂಟ್ಸ್!







