ಬೆಂಗಳೂರು : ರಾಜ್ಯದ ಕಂದಾಯ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಖುದ್ದು ಸಚಿವ ಕೃಷ್ಣಭೈರೇಗೌಡರೇ ಅಖಾಡಕ್ಕೆ ಇಳಿದು ಕಂದಾಯ ಇಲಾಖೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಓಡಾಡ್ತಿದ್ದಾರೆ. ಆದ್ರೂ ಕೂಡ ಕಾಂಚಾಣದ ಕಹಾನಿ ಮಾತ್ರ ನಿಲ್ತಿಲ್ಲ. ರಾಜ್ಯದ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ (AC), ತಾಲೂಕು ಕಚೇರಿ, ಗ್ರಾಮ ಪಂಚಾಯತ್ ಸೇರಿ ಹಲವು ಕಡೆ ಲಂಚಾವತಾರ ಸದ್ದು ಮಾಡ್ತಿದೆ. ಇದೀಗ ಉಪ ವಿಭಾಗಾಧಿಕಾರಿಗಳ ವಿರುದ್ಧವೇ ನ್ಯಾಯಕ್ಕಾಗಿ ಹೋರಾಡುವ ವಕೀಲರ ತಂಡ ತಿರುಗಿ ಬಿದ್ದಿದೆ.

ಹೌದು.. ಕಂದಾಯ ಇಲಾಖೆಯ ACಗಳ ವಿರುದ್ಧ ಸಿಡಿದೆದ್ದ ವಕೀಲರ ಸಂಘ, ಬೆಂಗಳೂರು ಉತ್ತರ AC ಕಿರಣ್ ಹಾಗೂ ದಕ್ಷಿಣ AC ವಿಶ್ವನಾಥ್ ವಿರುದ್ದ ಆಕ್ರೋಶ ಹೊರಹಾಕಿದೆ. AC ಕಚೇರಿಗಳು ಭ್ರಚ್ಟಾಚಾರದ ಕೂಪವಾಗಿದ್ದು, 9 ಸ್ಪೆಷಲ್ ಡಿಸಿಗಳೂ ಕೂಡ ಸರಿಯಾದ ರೀತಿಯಲ್ಲಿ ಕೆಲಸ ಮಾಡ್ತಿಲ್ಲ. ವಕೀಲರು AC ಕೋರ್ಟ್ನ ಆದೇಶ ಪ್ರತಿಯನ್ನ ಪಡೆಯಬೇಕಾದ್ರೂ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಂದೇ ಸಂಕೀರ್ಣದಲ್ಲಿ AC ಕೋರ್ಟ್ಗಳಿಲ್ಲದಿರೋದು ತೊಂದರೆಗೆ ಕಾರಣವಾಗ್ತಿದೆ.

ACಗಳು ಬ್ರೋಕರ್ಗಳ ಮೂಲಕ ಲ್ಯಾಂಡ್ ಖಾತೆ ಮಾಡ್ತಿದ್ದು, ಆದೇಶವನ್ನ ಯಾರು ಹಣ ಕೊಡ್ತಾರೋ ಅಂಥವರಿಗೆ ನೀಡ್ತಿದ್ದಾರೆ. ಪೌತಿ ಖಾತೆಗಳನ್ನ ಕೂಡ ಮಾಡೋಕೆ ಕೋಟಿ ಕೋಟಿ ಕೇಳ್ತಾರೆ. ವ್ಯವಹಾರ ಮಾಡೋಕಾಗಿಯೇ ACಗಳು ಕೂತಿರ್ತಾರೆ. ಸರ್ಕಾರಿ ಜಾಗಗಳಿಗೂ ಖಾತೆ ಕಂದಾಯ ಮಾಡಿಕೊಡುವ ಕೆಲಸ ನಡೀತಿದೆ, ಇನ್ನೂ ಕೇಸುಗಳನ್ನ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಬೇಕು, ಆದೇಶ ಪ್ರತಿಯ ಸರ್ಟಿಫೈಡ್ ಕಾಪಿಯನ್ನ ಕೊಡೋಕೂ ಮೀನಾಮೇಷ ಎಣಿಸ್ತಾರೆ ಎಂದು ವಕೀಲರು ಆಕ್ರೋಶ ಹೊರಹಾಕಿದ್ದಾರೆ.
ಅಷ್ಟೇ ಅಲ್ಲದೇ, ಪ್ರಕಾಶ್ ಪಾಟೀಲ್ ಎಂಬ ಬ್ರೋಕರ್ನಿಂದ ಎಲ್ಲಾ ಡೀಲಿಂಗ್ಗಳು ನಡೆಯುತ್ತಿದ್ದು, ACಗಳ ಪೋಸ್ಟಿಂಗ್ ಕೂಡ ಪ್ರಕಾಶ್ ಪಾಟೀಲನೇ ಮಾಡ್ತಾನಂತೆ. ಶಾಂಗ್ರಿಲಾ ಹೋಟೆಲ್ನಲ್ಲಿ ಕೇಸ್ ಅಡ್ಮಿಟ್ ಮಾಡೋಕೂ ಅಲ್ಲೇ ಡೀಲಿಂಗ್ ನಡೆಯುತ್ತೆ, ಖಾಸಗಿ ಜಾಗದಲ್ಲಿ ಸರ್ಕಾರಿ ಫೈಲ್ಗಳನ್ನ ಇಟ್ಟು ವ್ಯವಹಾರ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಎಲ್ಲಾ ವಿಚಾರಕ್ಕೆ ಶೀಘ್ರ ಪರಿಹಾರ ಸೂಚಿಸುವಂತೆ ವಕೀಲರ ಸಂಘ ಆಗ್ರಹಿಸಿದ್ದು, ಡಿಸಿ ಜಗದೀಶ್ ಇಲ್ಲದೇ ಇರೋ ಕಾರಣ ಸ್ಪೆಷಲ್ ಡಿಸಿ ಬಾಲಚಂದ್ರಗೆ ಮನವಿ ಪತ್ರ ನೀಡಿದ್ದಾರೆ.
ಇದನ್ನೂ ಓದಿ : 15 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ವ್ಯಯ – ನಮ್ಮ ಮೆಟ್ರೋ ಆಡಳಿತ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್ಸ್!







