ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ನಮ್ಮ ಮೆಟ್ರೋದ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ಸಿಲಿಕಾನ್ ಸಿಟಿಯ ವಿದ್ಯಾರ್ಥಿಗಳು BMRCL ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹೌದು.. ಮೆಟ್ರೋ ಟೋಕನ್ಗಾಗಿ ಅರ್ಧ ಗಂಟೆ ಕಾಯಬೇಕು, ಕೇವಲ 15 ನಿಮಿಷ ಹೋಗುವ ಪ್ರಯಾಣಕ್ಕೆ ಈಗ ಒಂದೂವರೆ ಆಗುತ್ತಿದೆ. ಇದರಿಂದ ಸಿಟಿಯ ವಿದ್ಯಾರ್ಥಿಗಳು ಕ್ಲಾಸ್ಗಳನ್ನು ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರ್ಪಲ್ ಲೈನ್ ಕೆಲ ನಿಲ್ದಾಣಗಳಲ್ಲಿ ನಿತ್ಯ ಟೋಕನ್ ಪಡೆಯಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಮೆಟ್ರೋ ಸಿಬ್ಬಂದಿಗಳ ಕೊರತೆಯಿಂದ ಈ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.

ಮತ್ತೊಂದೆಡೆ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಓಡಾಟವೂ ಜಾಸ್ತಿ ಆಗ್ತಿದ್ದು, ಕೆಲ ಪ್ಲಾಟ್ ಫಾರ್ಮ್ ಗಳಲ್ಲಿ ಮೆಟ್ರೋ ಸಿಬ್ಬಂದಿಗಳೇ ಇರಲ್ಲ. ಸದ್ಯ ಪರಿಸ್ಥಿತಿಯಿಂದ ‘BMTC ಬಸ್ನಲ್ಲಿ ಬೇಗ ಹೋಗ್ಬಿಡ್ತೀವಿ’ ಎನ್ನುತ್ತಿರುವ ವಿದ್ಯಾರ್ಥಿಗಳು, ಬಿಎಂಆರ್‌ಸಿಎಲ್ ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : 11 ಮಂದಿ ಕಂದಾಯ ಅಧಿಕಾರಿಗಳಿಂದ 100 ಕೋಟಿ ಭೂಮಿ ಲೂಟಿ.. FIR ಯಾವಾಗ ರೆವೆನ್ಯೂ ಮಂತ್ರಿಗಳೇ?







