ಬಸವೇಶ್ವರನಗರ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ವಿರುದ್ಧ ಲೋಕಾಯುಕ್ತಕ್ಕೆ ಹೋಟೆಲ್ ಮಾಲೀಕರ ದೂರು!

ಬೆಂಗಳೂರು : ಬಸವೇಶ್ವರನಗರದ ಸಬ್ ಇನ್ಸ್​​ಪೆಕ್ಟರ್​ ಭಾನುಪ್ರಕಾಶ್ ವಿರುದ್ದ’ಕರಾವಳಿ ಕಿಚನ್’ ಹೋಟೆಲ್ ಮಾಲೀಕರಾದ ಮೀನಾ ರಾಕೇಶ್​ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಬ್ ಇನ್ಸ್​​ಪೆಕ್ಟರ್ ಭಾನುಪ್ರಕಾಶ್ ವಿರುದ್ದ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬಂದಿದ್ದು, ಏಕವಚನದಲ್ಲಿ ನಿಂದಿಸಿ, FIR ಹಾಕಿ ಜೈಲಿಗೆ ಹಾಕುತ್ತೇನೆ ಎಂದು ಗದರಿಸಿ ಬ್ಲಾಕ್ ಮೇಲ್ ಮಾಡಿ ಅವಮಾನಿಸಿರುವ ಬಗ್ಗೆ ‘ಕರಾವಳಿ ಕಿಚನ್’ ಹೋಟೆಲ್ ಮಾಲೀಕರಾದ ಮೀನಾ ರಾಕೇಶ್ ದೂರು ದಾಖಲಿಸಿದ್ದಾರೆ. 

ಮೀನಾ ರಾಕೇಶ್ ಅವರು ಶಮಂತ್ ಎಂಬವನ ವಿರುದ್ಧ ವಂಚನೆ ದೂರು ನೀಡಿದ್ದರು ಸಹ ಯಾವುದೇ ರೀತಿಯ ಕ್ರಮ ಜರುಗಿಸದ ಸಬ್ ಇನ್ಸ್​ಪೆಕ್ಟರ್​ ಭಾನುಪ್ರಕಾಶ್, ತಮ್ಮ ವಿರುದ್ಧವೇ ಕ್ರಮ ಜರುಗಿಸಲು ಮುಂದಾಗಿದ್ದು, ನೀವೇ ಶಮಂತನ ಜೊತೆ ಒಪ್ಪಂದ ಮಾಡಿಕೊಂಡು ಅವರು ಹೇಳಿದ ಹಾಗೆ ಹಣವನ್ನು ಕೊಟ್ಟು ಸೆಟಲ್ಮೆಂಟ್ ಮಾಡಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ವಿರುದ್ಧ FIR ಹಾಕಿ ಜೈಲಿಗೆ ಹಾಕುತ್ತೇನೆ ಎಂದು ಹೆದರಿಸಿ ಏಕವಚನದಲ್ಲಿ ನಿಂದಿಸಿ, ಅವಮಾನಿಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

<iframe src="https://www.facebook.com/plugins/video.php?height=476&href=https%3A%2F%2Fwww.facebook.com%2Freel%2F1785359255687417%2F&show_text=false&width=267&t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>

ಇನ್ನೂ ಸಬ್ ಇನ್ಸ್​ಪೆಕ್ಟರ್​ ಭಾನುಪ್ರಕಾಶ್ ಹೇಳಿದಂತೆ ಶಮಂತ್​​ನ​ ಜೊತೆ ಸೆಟಲ್ಮೆಂಟ್ ಮಾಡಿಕೊಳ್ಳದ ಕಾರಣ ಮೀನಾ ರಾಕೇಶ್ ವಿರುದ್ದ ಸುಳ್ಳು ಆರೋಪ ಮತ್ತು ಆಪಾದನೆಯನ್ನು ಮಾಡಿ ಎಫ್‌ಐಆರ್ ಕೂಡ ಹಾಕಲಾಗಿದೆ. ಹೀಗಾಗಿ ನೊಂದಿರುವ ಮೀನಾ ರಾಕೇಶ್ ಬಸವೇಶ್ವರನಗರ ಪೊಲೀಸ್​ ಸಬ್ ಇನ್ಸ್​ಪೆಕ್ಟರ್​ ಭಾನುಪ್ರಕಾಶ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ, ಪೊಲೀಸ್​ ಕಮಿಷನರ್​ ಹಾಗೂ ಗವರ್ನರ್​ಗೆ ಲಿಖಿತ ರೂಪದಲ್ಲಿ ದೂರನ್ನು ನೀಡಿದ್ದಾರೆ.

ದೂರಿನಲ್ಲಿ ಏನಿದೆ? 

<iframe src="https://www.facebook.com/plugins/video.php?height=476&href=https%3A%2F%2Fwww.facebook.com%2Freel%2F807056938561065%2F&show_text=false&width=267&t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>

ಇದನ್ನೂ ಓದಿ : ಗೋಲುಗಳ ಸುರಿಮಳೆ.. ಏಷ್ಯಾಕಪ್‌ ಹಾಕಿಯಲ್ಲಿ ಟೀಂ ಇಂಡಿಯಾಗೆ ಹ್ಯಾಟ್ರಿಕ್‌ ಗೆಲುವು!

Btv Kannada
Author: Btv Kannada

Read More