ಬೆಂಗಳೂರು : ಪೊಲೀಸ್ ID ಕಾರ್ಡ್ ಹಿಡಿದು ಓಡಾಡ್ತಿದ್ದ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕಳ್ಳ ಟೋಲ್, ಏರ್ಪೋರ್ಟ್ ಎಲ್ಲೇ ಇದ್ರೂ ಎದೆಯುಬ್ಬಿಸಿ ಓಡಾಡ್ತಿದ್ದ. ನಾನೇ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಂತ ಹುಬ್ಬೇರಿಸ್ತಿದ್ದ. PSI ಮಂಜುನಾಥ್ ಎಂಬುವವರ ID ಕಾರ್ಡ್ಗೆ ತನ್ನ ಫೋಟೋ ತೇಪೆ ಹಾಕಿ ಖತರ್ನಾಕ್ ರವಿ ಕರಿಹೋಬನಹಳ್ಳಿ ಎಂಬಾತ ಜನರಿಗೆ ಮೋಸ ಮಾಡ್ತಿದ್ದ. ಇದೀಗ ಕಳ್ಳನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ರವಿ ಕರಿಹೋಬನಹಳ್ಳಿ ಸಾರ್ವಜನಿಕರನ್ನು ಸುಲಿಗೆ ಮಾಡೋಕೂ ಪೊಲೀಸ್ ID ತೋರಿಸ್ತಿದ್ದ. ರವಿ ಶೇಷಾದ್ರಿಪುರಂನ ರೇಣುಕಾ ಶುಗರ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ರೇಣುಕಾ ಶುಗರ್ಸ್ನಲ್ಲಿ ಫೀಲ್ಡ್ ಆಫೀಸರ್ ಆಗಿ ಕಳ್ಳ ಪೊಲೀಸ್ ಕೆಲಸ ಮಾಡ್ತಿದ್ದ, ರವಿ ಏರ್ಪೋರ್ಟ್ ಇಮಿಗ್ರೇಷನ್ ಬಳಿಯೂ ID ಕಾರ್ಡ್ ತೋರಿಸಿದ್ದ. ID ಸ್ಕ್ಯಾನ್ ಮಾಡಿದ್ದ ಇಮಿಗ್ರೇಷನ್ ಅಧಿಕಾರಿಗಳಿಗೆ ಅನುಮಾನ ಬಂದು, ನಕಲಿ ಪೊಲೀಸ್ ರವಿ ಕರಿಹೋಬನಹಳ್ಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಮಾಹಿತಿ ತಿಳಿದ ಪೀಣ್ಯ ಪೊಲೀಸರಿಂದ ಆರೋಪಿ ರವಿ ಅರೆಸ್ಟ್ ಮಾಡಿದ್ದಾರೆ. ಇದೀಗ ಫೇಕ್ PSI ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರೀತಿದ್ದಾನೆ.
ಇದನ್ನೂ ಓದಿ : ಬಡ್ಡಿ ಆಸೆ ತೋರಿಸಿ 100 ಕೋಟಿ ವಂಚನೆ – ಖತರ್ನಾಕ್ ದಂಪತಿ ಎಸ್ಕೇಪ್!
