ಬಡ್ಡಿ ಆಸೆ ತೋರಿಸಿ 100 ಕೋಟಿ ವಂಚನೆ – ಖತರ್ನಾಕ್ ದಂಪತಿ ಎಸ್ಕೇಪ್!

ಬೆಂಗಳೂರು : ಬಡ್ಡಿ ಆಸೆ ತೋರಿಸಿ ಬರೋಬ್ಬರಿ 100 ಕೋಟಿ ವಂಚನೆ ಮಾಡಿ ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎ&ಎ ಚಿಟ್ ಫಂಡ್ ಆ್ಯಂಡ್ ಫೈನಾನ್ಸ್ ಹೆಸರಲ್ಲಿ ಕೇರಳ ಮೂಲದ ಟೋಮಿ ಹಾಗೂ ಶೈನಿ ದಂಪತಿ ಜನರಿಗೆ ವಂಚಿಸಿದ್ದಾರೆ.

ಬೆಂಗಳೂರಿನ ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ಎ&ಎ ಚಿಟ್ಸ್ & ಫೈನಾನ್ಸ್ ನಡೆಸ್ತಿದ್ದ ಟೋಮಿ ಹಾಗೂ ಶೈನಿ ದಂಪತಿ ಜನರಿಗೆ 15-20 ಪರ್ಸೆಂಟ್ ಬಡ್ಡಿ ಕೊಡೋದಾಗಿ ಹೇಳಿ ನಂಬಿಸಿದ್ದರು. ಟೋಮಿ& ಶೈನಿಯ ಮೋಸದಾಟಕ್ಕೆ ನೂರಾರು ಜನ ಬೀದಿಪಾಲಾಗಿದ್ದಾರೆ. 25 ವರ್ಷದಿಂದ ಜನರ ಕಿವಿಗೆ ಫ್ಲವರ್ ಇಡ್ತಾನೇ ಬಂದಿದ್ದ ವಂಚಕ ದಂಪತಿ ಇದೀಗ ಹೇಳ್ದೇ ಕೇಳ್ದೇ ಹಣ ತಗೊಂಡು ಕಾಲ್ಕಿತ್ತಿದ್ದಾರೆ.

ಟೋಮಿ & ಶೈನಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಾವಿರಾರು ಜನರು ಈಗ ಬಡ್ಡಿ ಆಸೆಗೆ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮಾತ್ರೆ ಖರ್ಚು, ಮದ್ವೆಗಾಗಿ ಕೂಡಿಟ್ಟಿದ್ದ ಹಣ ಗುಳುಂ ಆಗಿದೆ. ವಂಚಕ ದಂಪತಿ ಇರೋ ಬರೋ ಪ್ರಾಪರ್ಟಿ ಕೂಡ ಮಾರಾಟ ಮಾಡಿ ಎಸ್ಕೇಪ್ ಆಗಿದ್ದು, ಮುಂದೇನು ಅಂತಾ ತೋಚದ ಜನರು  ತಲೆ ಮೇಲೆ‌ ಕೈಹೊತ್ತು ಕುಳಿತಿದ್ದಾರೆ. ವಂಚನೆ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ FIR ದಾಖಲು ದಾಖಲಾಗಿದ್ದು, ವಂಚಕ ದಂಪತಿ ಟೋಮಿ& ಶೈನಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕರಾವಳಿಯಲ್ಲಿ ವರುಣನ ಅಬ್ಬರ – ಈ ಜಿಲ್ಲೆಗಳಲ್ಲಿ ಜು.12ರವರೆಗೂ ಭಾರೀ ಮಳೆ!

Btv Kannada
Author: Btv Kannada

Read More