ಟೆಹ್ರಾನ್ : ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್ ಟೆಹ್ರಾನ್‌ನಲ್ಲಿರುವ ಇರಾನ್ನ ಸರ್ಕಾರಿ ಟಿವಿ ವಾಹಿನಿ ಐಆರ್‌ಐಬಿ (Islamic Republic of Iran Broadcasting) ಕಚೇರಿಯ ಮೇಲೆಯೇ ಬಾಂಬ್ ದಾಳಿ ನಡೆಸಿದೆ.
ಐಆರ್‌ಐಬಿ ನಿರೂಪಕಿ ಸಹಾರ್ ಇಮಾಮಿ ಎಂಬವರು ಇಸ್ರೇಲ್ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್ ಐಆರ್‌ಐಬಿ ಕಟ್ಟಡದ ಮೇಲೆಯೇ ಇಸ್ರೇಲ್ ವಾಯುಸೇನೆ ಬಾಂಬ್ ದಾಳಿ ನಡೆಸಿದೆ. ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ದಾಳಿಗೆ ಇರಾನ್ನ ಸರ್ಕಾರಿ ಟಿವಿ(IRIB)ಯ ಮಾಧ್ಯಮದ ಕಟ್ಟಡಕ್ಕೆ ಹಾನಿಯಾಗಿದೆ. 11 ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ತಾತ್ಕಾಲಿಕವಾಗಿ ಟಿವಿ ಚಾನಲ್ ಪ್ರಸಾರ ಸ್ಥಗಿತಗೊಳಿಸಲಾಗಿದೆ.
ಪಶ್ಚಿಮ ಏಷ್ಯಾದ ಇಸ್ರೇಲ್-ಇರಾನ್ ದೇಶಗಳ ಮಧ್ಯೆ ಯುದ್ಧೋನ್ಮಾದ ತಾರಕಕ್ಕೇರಿದ್ದು, ಸುಮಾರು 2,000 ಕಿ.ಮೀ. ದೂರ ಇದ್ದರೂ ಎರಡೂ ರಾಷ್ಟ್ರಗಳು ಪರಸ್ಪರ ಖಂಡಾಂತರ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಸಂಘರ್ಷ ನಡೆಸುತ್ತಿವೆ. 4 ದಿನಗಳ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ!
