ರಾಯಚೂರು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದಾರೆ.
ನಿನ್ನೆ ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ ಅವರು, ರಥೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸಿದರು. ಉತ್ಸವರಾಯರ ಪಾದಪೂಜೆ, ಮಂಚಾಲಮ್ಮ ದೇವಿ ಪೂಜೆ, ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮಠದಲ್ಲಿ ಸಂಜೆ ನಡೆದ ಉತ್ಸವಗಳಲ್ಲಿ ಭಾಗವಹಿಸಿದ ಸಚಿವರು,. ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶಿರ್ವಚನ ಪಡೆದರು. ಫಲ ಮಂತ್ರಾಕ್ಷತೆ ನೀಡಿ ಪ್ರಹ್ಲಾದ್ ಜೋಶಿ ಅವರಿಗೆ ಶ್ರೀಗಳು ಆಶಿರ್ವದಿಸಿದರು.
ಇದನ್ನೂ ಓದಿ : ಬೆಂಗಳೂರಿಗರೇ ಅಲರ್ಟ್.. ಜೂನ್ 19ರಂದು ನಗರದಾದ್ಯಂತ 24 ಗಂಟೆ ಕಾವೇರಿ ನೀರು ಸರಬರಾಜು ಸ್ಥಗಿತ!

Author: Btv Kannada
Post Views: 191