Download Our App

Follow us

Home » ಅಪರಾಧ » ಟಿಕೆಟ್‌ ವಿಚಾರಕ್ಕೆ ಜಗಳ : ಬಿಎಂಟಿಸಿ ಕಂಡಕ್ಟರ್​​ ಮೇಲೆ ಹ*ಲ್ಲೆ ಮಾಡಿದ ಮಹಿಳೆ..!

ಟಿಕೆಟ್‌ ವಿಚಾರಕ್ಕೆ ಜಗಳ : ಬಿಎಂಟಿಸಿ ಕಂಡಕ್ಟರ್​​ ಮೇಲೆ ಹ*ಲ್ಲೆ ಮಾಡಿದ ಮಹಿಳೆ..!

ಬೆಂಗಳೂರು : ಟಿಕೆಟ್‌ ವಿಚಾರಕ್ಕೆ ಮಹಿಳಾ ಪ್ರಯಾಣಿಕರು ಹಾಗೂ ಮಹಿಳಾ ಕಂಡಕ್ಟರ್​ ಮಧ್ಯೆ ಜಗಳ ನಡೆದಿದೆ. ಮಹಿಳಾ ಕಂಡಕ್ಟರ್​ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ.

ಗುರುತಿನ ಚೀಟಿ ತೋರಿಸಿ ಉಚಿತ ಟಿಕೆಟ್ ಪಡೆಯುವ ವಿಚಾರಕ್ಕೆ ಬಸ್​ನಲ್ಲಿ ಕಂಡಕ್ಟರ್ ಸುಕನ್ಯಾ ಮತ್ತು ಮೋನಿಷಾ ನಡುವೆ ಜಗಳ ಶುರುವಾಗಿದೆ. ಈ ಗಲಾಟೆ ತಾರಕಕ್ಕೇರಿ ದಾಸರಹಳ್ಳಿ ಬಳಿ ಮೋನಿಷಾ ಕಂಡಕ್ಟರ್ ಸುಕನ್ಯಾ ಮೇಲೆ ಹಲ್ಲೆ ಮಾಡಿದ್ದಾರೆ.

ನಗರೂರಿನಿಂದ ಮೆಜಸ್ಟಿಕ್ ಬರುವ ಮಾರ್ಗದಲ್ಲಿ ಡಿಪೋ- 40ಕ್ಕೆ ಸೇರಿದ ಬಿಎಂಟಿಸಿ ಬಸ್​ನಲ್ಲಿ ಈ ಘಟನೆ ನಡೆದಿದೆ. ದಾಸರಹಳ್ಳಿ ಬಳಿ ಬಸ್ ಕಂಡಕ್ಟರ್ ಸುಕನ್ಯಾ ಮೇಲೆ ಮಹಿಳೆ ಹಲ್ಲೆ ಮಾಡಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಟಿಕೆಟ್ ಪಡೆಯದೇ ಓರ್ವ ಮಹಿಳೆ ಹಾಗೆಯೇ ಕುಳಿತಿದ್ದಾರೆ. ಟಿಕೆಟ್​ ಪಡೆಯುವ ವಿಚಾರಕ್ಕೆ ಸುಕನ್ಯಾ ಜೊತೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಮಹಿಳೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಗೆ ಕಂಡಕ್ಟರ್ ದೂರು ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here