Download Our App

Follow us

Home » ರಾಜ್ಯ » ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ..!

ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ : ಇಲ್ಲಿದೆ ಸಂಪೂರ್ಣ ಪಟ್ಟಿ..!

ಬೆಂಗಳೂರು : ಲೋಕಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಬಿಜೆಪಿ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು 39 ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ.

ಇನ್ನುಳಿದ 9 ಜಿಲ್ಲೆಗಳಿಗೆ ಹಿಂದಿನ ಜಿಲ್ಲಾಧ್ಯಕ್ಷರನ್ನೇ ಮತ್ತೊಂದು ಅವಧಿಗೆ ಮುಂದುವರಿಸಲಾಗಿದೆ. ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ, ಮೂವರು ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ : 

 • ಮೈಸೂರು ನಗರ – ಎಲ್​.ನಾಗೇಂದ್ರ
 • ಮೈಸೂರು ಗ್ರಾಮಾಂತರ-L.R.ಮಹಾದೇವಸ್ವಾಮಿ
 • ಚಾಮರಾಜನಗರ-ನಿರಂಜನ್ ಕುಮಾರ್
 • ಮಂಡ್ಯ – ಇಂದ್ರೇಶ್ ಕುಮಾರ್
 • ಹಾಸನ – ಸಿದ್ದೇಶ್ ನಾಗೇಂದ್ರ
 • ಕೊಡಗು-ರವಿ ಕಾಳಪ್ಪ, ಗದಗ-ರಾಜು ಕುರಡಗಿ
 • ದಕ್ಷಿಣ ಕನ್ನಡ – ಸತೀಶ್ ಕುಂಪಲ
 • ಉಡುಪಿ – ಕಿಶೋರ್ ಕುಂದಾಪುರ
 • ಚಿಕ್ಕಮಗಳೂರು – ದೇವರಾಜ ಶೆಟ್ಟಿ
 • ಶಿವಮೊಗ್ಗ – ಟಿ.ಡಿ.ಮೇಘರಾಜ್
 • ಉತ್ತರ ಕನ್ನಡ – ಎನ್​.ಎಸ್​.ಹೆಗಡೆ
 • ಹಾವೇರಿ – ಅರುಣ್​ಕುಮಾರ್ ಪೂಜಾರಿ
 • ಹುಬ್ಬಳ್ಳಿ-ಧಾರವಾಡ – ತಿಪ್ಪಣ್ಣ ಮಜ್ಜಗಿ
 • ಧಾರವಾಡ ಗ್ರಾಮಾಂತರ – ನಿಂಗಪ್ಪ ಸುತ್ತಗಟ್ಟಿ
 • ಬೆಳಗಾವಿ ನಗರ-ಶ್ರೀಮತಿ ಗೀತಾ ಸುತಾರ್
 • ಬೆಳಗಾವಿ ಗ್ರಾಮಾಂತರ-ಸುಭಾಷ್ ಪಾಟೀಲ್
 • ಚಿಕ್ಕೋಡಿ – ಸತೀಶ್ ಅಪ್ಪಾಜಿಗೋಳ್
 • ಬಾಗಲಕೋಟೆ – ಶಾಂತಗೌಡ ಪಾಟೀಲ್
 • ವಿಜಯಪುರ – ಆರ್.ಎಸ್.ಪಾಟೀಲ್
 • ಬೀದರ್ – ಸೋಮನಾಥ ಪಾಟೀಲ್
 • ಕಲಬುರಗಿ ನಗರ-ಚಂದ್ರಕಾಂತ ಪಾಟೀಲ್
 • ಕಲಬುರಗಿ ಗ್ರಾಮಾಂತರ-ಶಿವರಾಜ ಪಾಟೀಲ್ ರದ್ದೇವಾಡಿ
 • ಯಾದಗಿರಿ – ಅಮೀನ್ ರೆಡ್ಡಿ
 • ರಾಯಚೂರು – ಶಿವರಾಜ ಪಾಟೀಲ್
 • ಕೊಪ್ಪಳ – ನವೀನ್ ಗುಳಗಣ್ಣನವರ್
 • ಬಳ್ಳಾರಿ-ಅನೀಲ್ ಕುಮಾರ್ ಮೋಕಾ
 • ವಿಜಯನಗರ-ಚನ್ನಬಸವನಗೌಡ ಪಾಟೀಲ್
 • ದಾವಣಗೆರೆ – ರಾಜಶೇಖರ್,ಚಿತ್ರದುರ್ಗ – ಎ.ಮುರಳಿ
 • ತುಮಕೂರು-H.S.ರವಿಶಂಕರ(ಹೆಬ್ಬಾಕ)
 • ಮಧುಗಿರಿ – ಬಿ.ಸಿ.ಹನುಮಂತೆಗೌಡ,
 • ರಾಮನಗರ – ಆನಂದಸ್ವಾಮಿ
 • ಬೆಂಗಳೂರು ಗ್ರಾಮಾಂತರ-ರಾಮಕೃಷ್ಣಪ್ಪ
 • ಚಿಕ್ಕಬಳ್ಳಾಪುರ – ರಾಮಲಿಂಗಪ್ಪ-ಕೋಲಾರ-K.N.ವೇಣುಗೋಪಾಲ್
 • ಬೆಂಗಳೂರು ಉತ್ತರ – ಎಸ್​.ಹರೀಶ್-
 • ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ-
 • ಬೆಂಗಳೂರು ದಕ್ಷಿಣ-ಸಿ.ಕೆ.ರಾಮಮೂರ್ತಿ

ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ಸಂಕ್ರಾತಿ ಹಬ್ಬದ ಸಂಭ್ರಮ..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

Live Cricket

Add Your Heading Text Here