ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನಲೆ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇದೀಗ ದರ್ಶನ್‌ರನ್ನು ನೋಡಲು ಬಳ್ಳಾರಿ ಸೆಂಟ್ರಲ್ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ವಿಜಯಲಕ್ಷ್ಮಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದ ತಂದಿದ್ದಾರೆ.
ಇದನ್ನೂ ಓದಿ : ನಾಗಮಂಗಲ ಗಲಭೆ ಪ್ರಕರಣದಲ್ಲಿ 53 ಮಂದಿ ಅರೆಸ್ಟ್..!
Post Views: 97