Download Our App

Follow us

Home » ಅಪರಾಧ » ಬೆಂಗಳೂರಿನ ರೇಸ್​ಕೋರ್ಸ್ ಬುಕ್ಕಿ ಕೌಂಟರ್​ಗಳ ಮೇಲೆ CCB ದಾಳಿ : 3.47 ಕೋಟಿ ರೂ ವಶಕ್ಕೆ..!

ಬೆಂಗಳೂರಿನ ರೇಸ್​ಕೋರ್ಸ್ ಬುಕ್ಕಿ ಕೌಂಟರ್​ಗಳ ಮೇಲೆ CCB ದಾಳಿ : 3.47 ಕೋಟಿ ರೂ ವಶಕ್ಕೆ..!

ಬೆಂಗಳೂರು : ರೇಸ್​ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. CCB ಅಧಿಕಾರಿಗಳು ಮಿಡ್​ನೈಟ್​ವರೆಗೂ ಜಾಲಾಡಿದ್ದು, ದಾಳಿ ವೇಳೆ CCB ಒಟ್ಟು 3.47 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ.

ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್​ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಮೇಲೆ ರೇಸ್​ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಬುಕ್ಕಿ ಕೌಂಟರ್​ಗಳನ್ನ ಲಾಕ್​ ಮಾಡಿದ್ದಾರೆ.

ಗ್ರಾಹಕನಿಂದ ಬುಕ್ಕಿಗಳು ಅಧಿಕ ಹಣ ಪಡೆದು, ಕಡಿಮೆ ಮೊತ್ತದ ಟಿಕೆಟ್ ನೀಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದರು. GST ಕಟ್ಟದೆ ವಂಚನೆ ಮಾಡಿದ ಆರೋಪ ಹಿನ್ನೆಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. 

ಎಎ ಅಸೋಸಿಯೇಟ್ಸ್,ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಶೆಟ್ಟಿ ಅಸೋಸಿಯೇಟ್ಸ್, ಮೇಘನ ಎಂಟರ್ ಪ್ರೈಸಸ್,ಮಂಜು ಅಸೋಸಿಯೇಟ್ಸ್, ಮಾರುತಿ ಎಂಟರ್ ಪ್ರೈಸಸ್,ಆದಿತ್ಯ ಎಂಟರ್ ಪ್ರೈಸಸ್, ಪರಸ್ ಅಂಡ್ ಕೋ,ಬನಶಂಕರಿ ಎಂಟರ್ ಪ್ರೈಸಸ್, ಶ್ರೀಹರಿ ಎಂಟರ್ ಪ್ರೈಸಸ್,ತೇಜಸ್ವಿನಿ ಎಂಟರ್ ಪ್ರೈಸಸ್, ಸೂರ್ಯ ಅಂಡ್ ಕೋ.

ಹೆಚ್ಎನ್ಎಸ್ ಅಂಡ್ ಕೋ,ಸಾಯಿ ರತನ್,ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ,ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್‌.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ,ಆರ್.ಕೆ.ಎಂಟರ್ ಪ್ರೈಸಸ್ ಶ್ರೀವಾರಿ ಆ್ಯಂಡ ಕಂಪನಿ, ಕಾರ್ತಿಕ್ ಆ್ಯಂಡ ಕಂಪನಿ, ಅಮೃತಾಯ ಕೌಂಟರ್ ಗಳಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 60 ಮಂದಿಯನ್ನು ವಶಕ್ಕೆ ಪಡೆದು ಸ್ಟೇಷನ್​ ಬೇಲ್​ ಮೇಲೆ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ : ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ನಟ ಪ್ರಭಾಸ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ನಟ ದರ್ಶನ್​​ಗೆ ಮತ್ತೆ ಸಂಕಷ್ಟ – ಆರ್​​.ಆರ್​​​ ನಗರ ​ಠಾಣೆಯಲ್ಲಿ ದೂರು ದಾಖಲು..!

ಬೆಂಗಳೂರು : ನಟ ದರ್ಶನ್‌ ವಿರುದ್ಧ ದೂರುಗಳ ಮೇಲೆ ದೂರು ದಾಖಲಾಗುತ್ತಿದೆ. ಇಂದು ಅವರ ಹೇಳಿಕೆ ಖಂಡಿಸಿ ಆರ್.ಆರ್ ನಗರ  ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಈ

Live Cricket

Add Your Heading Text Here