ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 53 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. 150 ಮಂದಿ ವಿರುದ್ಧ FIR ದಾಖಲಿಸಿಕೊಂಡಿರುವ ಪೊಲೀಸರು, 15 ಪ್ರತ್ಯೇಕ FIR ದಾಖಲಿಸಿಕೊಂಡಿದ್ದಾರೆ.
ನಾಗಮಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಭೆ ಭುಗಿಲೆದ್ದಿದೆ. ಘಟನೆಯ ಪರಿಣಾಮ 20ಕ್ಕೂ ಹೆಚ್ಚು ಕಟ್ಟಗಳಿಗೆ ಹಾನಿಯಾಗಿದೆ. ಕಿಡಿಗೇಡಿಗಳು 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು CCTV ದೃಶ್ಯಗಳನ್ನು ಆಧರಿಸಿ ಎರಡೂ ಕಡೆಯವರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಮಂಡ್ಯ SP ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ : ‘ಒನ್ ಅಂಡ್ ಆ ಹಾಫ್’ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ : ‘ಹೇ ನಿಧಿ’ ಎಂದು ಹಾಡಿದ ಶ್ರೇಯಶ್ ಸೂರಿ-ಮಾನ್ವಿತಾ ಹರೀಶ್..!