ಹಾವೇರಿ : ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸಂಬಂಧವಾಗಿ FSL ಕಾಡಿನಲ್ಲಿ ಸ್ಥಳ ಮಹಜರ್ ಮಾಡಿದೆ. ಮಿಡ್ನೈಟ್ವರೆಗೂ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದು, FSL ಪರಿಶೀಲನೆ ವೇಳೆ ಮಹತ್ವದ ಸಾಕ್ಷಿ ಸಿಕ್ಕಿರೋ ಮಾಹಿತಿ ಲಭ್ಯವಾಗಿದೆ.
FSL ತಜ್ಞರ ತಂಡ ದಾವಣಗೆರೆಯಿಂದ ಬಂದಿದ್ದು, ಪೊಲೀಸ್ ಟೀಂ ಜತೆ ತೆರಳಿ ಕಾಡಿನಲ್ಲಿ ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಕಾಡು ಹಾನಗಲ್ ಪಟ್ಟಣದಿಂದ 8 ಕಿ.ಮೀ. ದೂರದಲ್ಲಿದೆ. ಶಿರಗೋಡ ಕಾಡಿನ ಎರಡು ಸ್ಥಳದಲ್ಲಿ ಗ್ಯಾಂಗ್ ರೇಪ್ ಆರೋಪ ವ್ಯಕ್ತವಾಗಿದೆ.
ಆರೋಪಿಗಳು ಮಹಿಳೆಯನ್ನು ಬಾಳೂರು ಕೆರೆ ಬಳಿಯೂ ಕರೆದೊಯ್ದಿದ್ದ. ಆರೋಪಿಗಳನ್ನೂ ಜತೆ ಕರೆದೊಯ್ದು ಸ್ಥಳ ಮಹಜರ್ ಮಾಡಿದ್ದಾರೆ. ಆರೋಪಿಗಳ ಅರೆಸ್ಟ್ ನಂತರ ಕೃತ್ಯದ ಸ್ಥಳ ಪತ್ತೆಯಾಗಿದೆ.
ಪ್ರಕರಣ : ಜ.08 ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು.
ಇದನ್ನು ಕಂಡ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ.
ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಹೋಟೆಲ್ನಲ್ಲಿ ಹಲ್ಲೆ ಮಾಡಿದ ಬಳಿಕ ಕಾಡಿಗೆ ಒಯ್ದು ರೇಪ್ ಮಾಡಿದ್ದಾರೆ. ಏಳು ಮಂದಿ ಮುಸ್ಲಿಂ ಯುವಕರಿಂದ ಗ್ಯಾಂಗ್ ರೇಪ್ ಆಗಿದೆ.
ಇದನ್ನೂ ಓದಿ : 4 ವರ್ಷದ ಕಂದನ ಕೊಂದ ಪ್ರಕರಣ : ಗೋವಾ ಹೋಟೆಲ್ನಲ್ಲಿ ಕೃತ್ಯವನ್ನು ಮರು ಸೃಷ್ಟಿ ಮಾಡಿಸಿದ ಪೊಲೀಸರು..!