ಬೆಂಗಳೂರು : ನಗರದ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸ್ಕೆಚ್ ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ಬಂಧಿಸಿದೆ. ತಮಿಳುನಾಡು ಮೂಲದ ನೂರುದ್ದೀನ್ ಅಲಿಯಾಸ್ ರಫಿ ಬಂಧಿತ.
2014ರಲ್ಲಿ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿಯ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ನೂರುದ್ದೀನ್ ಅಲಿಯಾಸ್ ರಫಿ ಬೇಕಾಗಿದ್ದ. ಈ ಹಿನ್ನಲೆ ತನಿಖೆ ನಡೆಸಿ ಶಂಕಿತ ಉಗ್ರನಾದ ರಫಿಯನ್ನು ಬುಧವಾರ ಮೈಸೂರಿನ ರಾಜೀವನಗರದಲ್ಲಿ ಬಂಧಿಸಲಾಗಿದೆ. ಮನೆಯಲ್ಲಿ 1 ಡ್ರೋನ್, ಮೊಬೈಲ್, ಲ್ಯಾಪ್‌ಟಾಪ್, ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೂರುದ್ದೀನ್ ಕೊಲಂಬೋದಲ್ಲಿ ಇರುವ ಪಾಕಿಸ್ತಾನಿ ಹೈಕಮೀಷನ್ ಕಚೇರಿನಲ್ಲಿ ಉದ್ಯೋಗಿ ಜತೆ ಸಂಪರ್ಕ ಹೊಂದಿದ್ದ. ಇನ್ನು, ಪಾಕಿಸ್ತಾನಿ ಪ್ರಜೆ ಅಮೀರ್ ಜುಬೇರ್ ಸಿದ್ಧಿಕಿಯ ಆಣತಿ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನಿ ಬೇಹುಗಾರರಿಗೆ ನೂರುದ್ದೀನ್ ಹಣ ಸಹಾಯ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಹಿಂದೆ ಹೈದರಾಬಾದ್ ಬೇಹುಗಾರಿಕಾ ಪ್ರಕರಣದಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ನೂರುದ್ದೀನ್, 2023ರ ಆಗಸ್ಟ್‌ನಲ್ಲಿ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಂತರ ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಗೈರಾಗಿದ್ದ. ಆದ್ದರಿಂದ ನೂರುದ್ದೀನ್ ವಿರುದ್ಧ ಜಾಮೀನು ರಹಿತ ವಾರಂಟ್ ಸಹ ಜಾರಿಯಾಗಿತ್ತು. ಸುಳಿವು ನೀಡಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಇನ್ನು, ನೂರುದ್ದೀನ್ ತಲೆಮರೆಸಿಕೊಂಡ ನಂತರ ಸ್ಥಗಿತಗೊಂಡಿದ್ದ ಆತನ ವಿರುದ್ಧದ ವಿಚಾರಣೆ ಈಗ ಪುನರಾರಂಭವಾಗಲಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಇದನ್ನೂ ಓದಿ : ಹುಬ್ಬಳ್ಳಿ : ಅಂಜಲಿ ಹ*ತ್ಯೆ ಕೇಸ್ – ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್-ಕಾನ್ಸ್ಟೇಬಲ್ ಸಸ್ಪೆಂಡ್..!
ಇದನ್ನೂ ಓದಿ : ಕೊನೆ ಕ್ಷಣದಲ್ಲಿ ಟಿಕೆಟ್ ಕ್ಯಾನ್ಸಲ್ - ಭಾರತಕ್ಕೆ ಬರದೆ ಕೈಕೊಟ್ಟ ಪ್ರಜ್ವಲ್ ರೇವಣ್ಣ..!