Download Our App

Follow us

Home » ಜಿಲ್ಲೆ » ಹುಬ್ಬಳ್ಳಿ : ಅಂಜಲಿ ಹ*ತ್ಯೆ ಕೇಸ್​ – ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಇನ್ಸ್​ಪೆಕ್ಟರ್-ಕಾನ್ಸ್​​ಟೇಬಲ್ ಸಸ್ಪೆಂಡ್..!

ಹುಬ್ಬಳ್ಳಿ : ಅಂಜಲಿ ಹ*ತ್ಯೆ ಕೇಸ್​ – ದೂರು ಬಂದಿದ್ರೂ ನಿರ್ಲಕ್ಷ್ಯ, ಬೆಂಡಿಗೇರಿ ಠಾಣೆಯ ಇನ್ಸ್​ಪೆಕ್ಟರ್-ಕಾನ್ಸ್​​ಟೇಬಲ್ ಸಸ್ಪೆಂಡ್..!

ಹುಬ್ಬಳ್ಳಿ : ನೇಹಾ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ನಿನ್ನೆ ಮತ್ತೊಂದು ಭೀಕರ ಕೊಲೆ ನಡೆದಿದೆ. ವೀರಾಪುರ ಓಣಿಯ 22 ವರ್ಷ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ್​ ಅಲಿಯಾಸ್ ಗಿರೀಶ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ. ಅಂಜಲಿ ಹತ್ಯೆ ಖಂಡಿಸಿ ಹುಬ್ಬಳ್ಳಿಯಲ್ಲಿ ನಿನ್ನೆ ಪ್ರತಿಭಟನೆಗಳೂ ನಡೆದಿದ್ದವು. ಏಮ್ಸ್​ ಆಸ್ಪತ್ರೆ ಮುಂದೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದ ಆರೋಪದ ಮೇರೆಗೆ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್​ ಮತ್ತು ಮಹಿಳಾ ಕಾನ್ಸ್​ಟೇಬಲ್​​ ಅನ್ನು ಅಮಾನತು ಮಾಡಲಾಗಿದೆ. ಜನರ ತೀವ್ರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರೇ ಈ ಕ್ರಮ ತೆಗೆದುಕೊಂಡಿದ್ದಾರೆ.

ತನ್ನ ಮೊಮ್ಮಗಳಿಗೆ ಜೀವ ಬೆದರಿಕೆ ಇದೆ ಎಂದು ಅಂಜಲಿ ಅಂಬಿಗೇರ ಕುಟುಂಬಸ್ಥರು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ರು. ದೂರು ನೀಡಿದ್ರೂ ನಿರ್ಲಕ್ಷ್ಯ ತೋರಿದ ಆರೋಪ ಕೇಳಿ ಬಂದಿದ್ದು, ಇನ್ಸ್​ಪೆಕ್ಟರ್ ಚಂದ್ರಶೇಖರ ಬಿ. ಚಿಕ್ಕೋಡಿ, ಕಾನ್ಸ್​ಟೇಬಲ್ ರೇಖಾ ಅವರನ್ನು ಅಮಾನತು ಮಾಡಿ ರೇಣುಕಾ ಸುಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಲಾಗಿತ್ತು. ತನ್ನ ಜೊತೆ ಬರದಿದ್ರೆ ನೇಹಾ ತರ ಕೊಲೆ ಮಾಡುತ್ತೇನೆ ಎಂದು ಹಂತಕ ವಾರ್ನಿಂಗ್ ಮಾಡಿದ್ದ ಎನ್ನಲಾಗಿದೆ. ಈ ಕೂಡಲೇ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ದೂರು ನೀಡಿದ್ರು. ಆಗ ಪೊಲೀಸ್ರು ಅಂಜಲಿ ಕುಟುಂಬಸ್ಥರಿಗೆ ಬೈದು ವಾಪಸ್​ ಕಳಿಸಿ ನಿರ್ಲಕ್ಷ್ಯ ತೋರಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕಷ್ಟ ಹೇಳಿಕೊಂಡ್ರೆ ಓವರ್​ ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್‌ ಅಂತೀರಾ : ಅನುಶ್ರೀ ಬೇಸರ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here