Download Our App

Follow us

Home » ಸಿನಿಮಾ » ಕಷ್ಟ ಹೇಳಿಕೊಂಡ್ರೆ ಓವರ್​ ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್‌ ಅಂತೀರಾ : ಅನುಶ್ರೀ ಬೇಸರ..!

ಕಷ್ಟ ಹೇಳಿಕೊಂಡ್ರೆ ಓವರ್​ ಆ್ಯಕ್ಟಿಂಗ್​ ಅಂತೀರಾ, ಸಾಧನೆ ಹೊಗಳಿದ್ರೆ ಬಕೆಟ್‌ ಅಂತೀರಾ : ಅನುಶ್ರೀ ಬೇಸರ..!

ಕರಾವಳಿಯ ಬೆಡಗಿ, ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅದ್ಭುತ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹೌದು, ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯ, ಅಭಿನಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಹಲವು ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿದ್ದಾರೆ.

ಅನುಶ್ರೀ ತಮ್ಮ ಚಟಪಟ ಮಾತು, ಶುದ್ಧ ಕನ್ನಡದಿಂದ ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವವು ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿಯೂ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಅನುಶ್ರೀ ಅವರು ಗೆದ್ದಿದ್ದಾರೆ.

ಸದ್ಯ ಅನುಶ್ರೀ ಅವರು ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ತುಳು ಪಾಡ್‌ಕಾಸ್ಟ್‌ ಒಂದರಲ್ಲಿ ಸಂದರ್ಶನ ಕೊಟ್ಟಿದ್ದರು. ತಮ್ಮ ಮದುವೆ ವಿಚಾರ ಸೇರಿದಂತೆ ಹಲವು ವೈಯಕ್ತಿಕ ವಿಚಾರಗಳನ್ನು ಕೂಡ ಅನುಶ್ರೀ ಅವರು ಈ ಕಾರ್ಯಕ್ರಮದಲ್ಲಿ ಶೇರ್‌ ಮಾಡಿಕೊಂಡಿದ್ದರು.

ಇದೀಗ ಅನುಶ್ರೀ ಅವರು ತಮ್ಮ ಇನ್​ಸ್ಟಾಗ್ರಾಮ್​ ನಲ್ಲಿ ಲೈವ್ ಬಂದು ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಮೇ 13ರಂದು ನೇರ ಪ್ರಸಾರದಲ್ಲಿ ಬಂದಿರುವ ಅನುಶ್ರೀಯವರು, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ತಮ್ಮ ರಿಯಾಲಿಟಿ ಶೋಗಳ ಕುರಿತೂ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು, ತಮ್ಮ ವಿರುದ್ಧ ಕೆಲವರು ಮಾಡುವ ಟೀಕೆಗಳ ಕುರಿತು ನೋವನ್ನು ತೋಡಿಕೊಂಡಿದ್ದಾರೆ. ಅವರ ಅಭಿಮಾನಿಯೊಬ್ಬರು ಖುಷಿಯಾಗಿರಿ ಎಂದು ಹೇಳಿದಾಗ, ಇಂಥ ಮಾತು ಹೇಳುವವರೇ ತುಂಬಾ ಅಪರೂಪ ಎನ್ನುತ್ತಾ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.

https://www.instagram.com/reel/C63wM50M6D4/?utm_source=ig_embed&ig_rid=e271b165-d35c-4a6a-adfe-f688fb3bd388

ಖುಷಿಯಾಗಿದ್ರೆ ಓವರ್​ ಆ್ಯಕ್ಟಿಂಗ್​ ಅಂತೀರಿ, ಸ್ವಲ್ಪ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದರೆ ಅದಕ್ಕೂ ಓವರ್ ಆ್ಯಕ್ಟಿಂಗ್​ ಅಂತೀರಿ, ಏನನ್ನಾದರೂ ನೋಡಿ ಆಶ್ಚರ್ಯ ಪಟ್ಟರೆ ಅದಕ್ಕೂ ಹಾಗೆಯೇ ಹೇಳುತ್ತೀರಿ. ಸಾಧನೆಯನ್ನು ಹೊಗಳಿದರೆ ಬಕೆಟ್​ ಅಂತೀರಿ. ಒಂದೊಂದು ಭಾವನೆಗೂ ಒಂದೊಂದು ಹೆಸರು ಕೊಡ್ತೀರಾ ಎಂದು ಅನುಶ್ರೀ ಅವರು ಬೇಸರ ತೋಡಿಕೊಂಡಿದ್ದಾರೆ.

ಹಾಗೆಯೇ ಮಾತು ಮುಂದುವರೆಸುತ್ತ ಇರಲಿ ಬಿಡಿ.. ಹತ್ತು ಜನರು ಹೀಗೆಲ್ಲಾ ಹೇಳಿದ್ರೂ, ಕೋಟ್ಯಂತರ ಮಂದಿ ಹರಸುವವರು ಇದ್ದಾರೆ. ಅವರ ಹೊಟ್ಟೆ ತಣ್ಣಗಾಗಿರಲಿ ಎಂದಿದ್ದಾರೆ. ಯಾರೂ ಯಾರನ್ನೂ ಹೇಟ್​ ಮಾಡಬೇಡಿ. ಯಾರಾದ್ರೂ ಇಷ್ಟ ಆಗಿಲ್ಲ ಅಂದ್ರೆ ಅವರ ಬಗ್ಗೆ ಏನೂ ಹೇಳಲೇಬೇಡಿ. ಹೊಗಳಲು ಆಗಿಲ್ಲ ಎಂದ್ರೆ ಕೆಟ್ಟದ್ದನ್ನು ಹೇಳಬೇಡಿ ಎಂದಿದ್ದಾರೆ.

ಇದನ್ನೂ ಓದಿ : ಕೋಲಾರ : ಕಾಶಿ, ಅಯೋಧ್ಯೆ ಪ್ರವಾಸದ ಹೆಸರಲ್ಲಿ ಹಣ ಪಡೆದು ಪಂಗನಾಮ ಹಾಕಿದ ವಂಚಕರು..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here