ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ತನಿಖೆಯನ್ನ SIT ಚುರುಕುಗೊಳಿಸಿದೆ. ಸತ್ಯನಾರಾಯಣ ವರ್ಮಾ ಮನೆಯಲ್ಲಿದ್ದ ಬರೋಬ್ಬರಿ 10 ಕೆ.ಜಿ ಚಿನ್ನದ ಬಿಸ್ಕೆಟ್ನ್ನು SIT ವಶಕ್ಕೆ ಪಡೆಯಲಾಗಿದೆ ಎಂದು SIT ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸತ್ಯನಾರಾಯಣ ವರ್ಮಾ ವಾಲ್ಮೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿದ್ದ. SIT ಅಧಿಕಾರಿಗಳು ಸತ್ಯನಾರಾಯಣ ವರ್ಮಾನನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ 15 ಕೆ.ಜಿ ಚಿನ್ನ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಸತ್ಯನಾರಾಯಣ ವರ್ಮಾ ತನ್ನ ಹೈದರಾಬಾದ್ ಪ್ಲಾಟ್ನಲ್ಲಿರೊ 10 ಕೆ.ಜಿ.ಚಿನ್ನದ ಬಿಸ್ಕೆಟ್ನ್ನು ತೋರಿಸಿದ್ದ. ಉಳಿದ ಚಿನ್ನದ ಬಿಸ್ಕೆಟ್ಗಾಗಿ SIT ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸತ್ಯನಾರಾಯಣ ವರ್ಮಾ ಈವರೆಗೂ ವಾಲ್ಮೀಕಿ ಹಗರಣದ ಹಣದಿಂದ ಬರೋಬ್ಬರಿ 35 ಕೆ.ಜಿ ಚಿನ್ನದ ಬಿಸ್ಕೆಟ್ನ್ನು ಖರೀದಿ ಮಾಡಿದ್ದಾರೆ.
ಇದನ್ನೂ ಓದಿ : ಧಾರವಾಡದ ನರೇಂದ್ರ ಟೋಲ್‌ಗೇಟ್ ಬಳಿ ಲಾರಿ ಅಪಘಾತ – ಡ್ರೈವರ್ ಸ್ಥಳದಲ್ಲೇ ಸಾವು..!
Post Views: 89