Download Our App

Follow us

Home » ಸಿನಿಮಾ » ಬೆಂಗಳೂರಿನಲ್ಲಿಯೇ ನಡೆಯಲಿದೆ “ಟಾಕ್ಸಿಕ್” ಸಿನಿಮಾದ ಶೂಟಿಂಗ್? – ಈ ಚಿತ್ರದ ಬಗ್ಗೆ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ..!

ಬೆಂಗಳೂರಿನಲ್ಲಿಯೇ ನಡೆಯಲಿದೆ “ಟಾಕ್ಸಿಕ್” ಸಿನಿಮಾದ ಶೂಟಿಂಗ್? – ಈ ಚಿತ್ರದ ಬಗ್ಗೆ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ..!

ಇಡೀ ವಿಶ್ವ ಸಿನಿ ಲೋಕವೇ ಎದುರು ನೋಡುತ್ತಿರುವ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್ – ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’. ಹೌದು, ಕೆಜಿಎಫ್ 2 ಚಿತ್ರದ ದೊಡ್ಡ ಗೆಲುವಿನ ನಂತರ ಯಶ್ ಯಾವ ಸಿನಿಮಾ ಮಾಡುತ್ತಾರೆ? ಆ ಚಿತ್ರದ ನಿರ್ದೇಶಕರು ಯಾರು? ಆ ಚಿತ್ರ ನಿರ್ಮಾಪಕರು ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದು “ಟಾಕ್ಸಿಕ್”.

ಮಾಲಿವುಡ್​ನ ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ ಅಳೆದು ತೂಗಿ ತಮ್ಮ 19ನೇ ಸಿನಿಮಾದ ಹೆಜ್ಜೆ ಇಡಲು ನಿರ್ಧರಿಸಿದ್ದು, ಗೀತು ಮೋಹನ್ ದಾಸ್ ಅವರು ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಕೆಲವೇ ಸೆಕೆಂಡುಗಳ ತುಣಕು ರಾಕಿ ಅಭಿಮಾನಿಗಳ ಎದೆಯಲ್ಲಿ ಕುತೂಹಲ ಹುಟ್ಟಿಸಿದೆ. ಈ ಮೂಲಕ ‘ಟಾಕ್ಸಿಕ್’ ಚಿತ್ರ  ಭಾರೀ ನಿರೀಕ್ಷೆಯನ್ನು ಹುಟ್ಟುಹಾಕುತ್ತಿವೆ.

ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ದೊಡ್ಡಮಟ್ಟದಲ್ಲಿ ಈ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದು, ಸರಿಸುಮಾರು 180 ಕೋಟಿ ಬಜೆಟ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಚಿತ್ರ ಅನೌನ್ಸ್ ಆದ ದಿನದಿಂದ ಈ ಸಿನಿಮಾ ಶೂಟಿಂಗ್ ಯಾವಾಗ? ಟಾಕ್ಸಿಕ್ ಕಂಪ್ಲೀಟ್ ಆಗಿ ಲಂಡನ್, ಶ್ರೀಲಂಕಾ, ಗೋವಾದಲ್ಲಿ ಶೂಟ್ ಆಗುತ್ತಾ ಎನ್ನುವ ಊಹಾಪೋಹಗಳು ಹರಿದಾಡುತ್ತಲೇ ಇವೆ. ಇದರ ಮಧ್ಯೆ ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿದೆ.

ಇತ್ತೀಚೆಗೆ ಗೋವಾದ ರೆಸಾರ್ಟ್‌ವೊಂದರಲ್ಲಿ ನಟ ಯಶ್ ಹಾಗೂ ಗೀತು ಮೋಹನ್ ದಾಸ್ ಕಾಣಿಸಿಕೊಂಡಿದ್ದ ಫೋಟೊಗಳು ಕೂಡ ವೈರಲ್ ಆಗಿತ್ತು. ಇದನ್ನು ನೋಡಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಶುರುವಾಗಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಸದ್ಯಕ್ಕೆ ಇನ್ನು ಶೂಟಿಂಗ್ ಆರಂಭವಾಗಿಲ್ಲ. ಪ್ರೀ ಪ್ರೊಡಕ್ಷನ್ ವರ್ಕ್ ಮಾತ್ರ ನಡೀತಿದೆ ಎಂದು ಹೇಳಲಾಗುತ್ತಿದೆ.

ಇದೀಗ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಸೆಟ್‌ ನಿರ್ಮಾಣ ಕೆಲಸ ಆರಂಭವಾಗಿದೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಒಳಗೆ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತದೆ ಹಾಗೂ ಚಿತ್ರಕ್ಕಾಗಿ ಅದ್ಧೂರಿ ಸೆಟ್​ಗಳ ನಿರ್ಮಾಣದ ಕೆಲಸಗಳು ನಡೀತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಕಥೆಗೆ ತಕ್ಕಂತೆ ಒಂದು ನಗರದ ಸೆಟ್‌ ಅನ್ನು ಅಲ್ಲಿ ಹಾಕಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಆದರೆ ಸೆಟ್‌ ಬಗ್ಗೆ ಯಾವುದೇ ವಿಚಾರ ಹೊರಬರದಂತೆ ಚಿತ್ರತಂಡ ಗೌಪ್ಯವಾಗಿ ಕೆಲಸ ಮುಂದುವರೆಸಿದೆ.

ಇನ್ನು, ಇದೇ ತಿಂಗಳಿನ 15 ತಾರೀಖಿನಿಂದ ಸಿನಿಮಾದ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಚಿತ್ರದ ಸೆಟ್ ವಿಚಾರಕ್ಕೆ ಬಂದರೆ 2 ಎಕರೆ ಜಾಗದಲ್ಲಿ ಸೆಟ್ ತಲೆ ಎತ್ತಲಿದೆ. 70 ದಶಕದಲ್ಲಿ ಭಾರತ ಹಾಗೂ ವಿದೇಶದ ನಗರವನ್ನು ನೆನಪಿಸುವಂತೆ ಈ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಕಟ್ಟಡಗಳು, ಎತ್ತರದ ಟವರ್‌ಗಳು, ಆಡಿಟೋರಿಯಂ ಮಾದರಿಯಲ್ಲಿ ಸೆಟ್‌ ನಿರ್ಮಾಣವಾಗಲಿದೆ, ಬೇರೆ ಬೇರೆ ರಾಜ್ಯಗಳಿಂದ ಸೆಟ್‌ ಕೆಲಸ ಮಾಡಲು ಕಾರ್ಮಿಕರು ಬಂದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಬಹಳ ಅದ್ಧೂರಿಯಾಗಿ ಸೆಟ್‌ ನಿರ್ಮಾಣವಾಗುತ್ತಿದ್ದು, ಕಾರ್ಮಿಕರು ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಇವೆಲ್ಲವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.

ಟೈಟಲ್, ನಿರ್ದೇಶಕಿ, ಹೀರೊ ಆಗಿ ಯಶ್, ಬ್ಯಾನರ್ ಬಿಟ್ಟರೆ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಸಾನಿಯಾ ಸರ್ದಾರಿಯಾ ಕಾಸ್ಟೂಮ್ ಡಿಸೈನ್ ಮಾಡಲಿದ್ದು, ಶ್ರುತಿ ಹಾಸನ್ ಕೂಡ ನಟಿಸುತ್ತಾರೆ ಎಂದು ಹೇಳಲಾಗಿದೆ. ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಯಶ್ ಸಹೋದರಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನುಳಿದಂತೆ ಬಾಲಿವುಡ್ ಬೆಡಗಿ ನಾಯಕಿಯಾಗಿ ನಟಿಸುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೇ ತಿಂಗಳು ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ.

ಇದನ್ನೂ ಓದಿ : ರಾಜ್ಯದ ಸಮಸ್ತ ಪೊಲೀಸ್ ಸಿಬ್ಬಂದಿಗಳಿಗೆ “ಪೊಲೀಸ್ ಧ್ವಜ ದಿನದ” ಶುಭಾಶಯ ತಿಳಿಸಿದ ಲಾಫಿಂಗ್ ಬುದ್ಧ ಚಿತ್ರತಂಡ..!

Leave a Comment

DG Ad

RELATED LATEST NEWS

Top Headlines

ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್​ಲೈನ್​ ಕೊಟ್ಟ ಸಿಎಂ ಸಿದ್ದು..!

ಬೆಂಗಳೂರು : ಮುಡಾ ಹಗರಣ ಆರೋಪದ ಅರ್ಜಿ ವಿಚಾರಣೆಯ ನಡುವೆಯೂ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ, ರಸ್ತೆ ಅಭಿವೃದ್ಧಿ ಮತ್ತು

Live Cricket

Add Your Heading Text Here