Download Our App

Follow us

Home » ಸಿನಿಮಾ » ರಾಜ್ಯದ ಸಮಸ್ತ ಪೊಲೀಸ್ ಸಿಬ್ಬಂದಿಗಳಿಗೆ “ಪೊಲೀಸ್ ಧ್ವಜ ದಿನದ” ಶುಭಾಶಯ ತಿಳಿಸಿದ ಲಾಫಿಂಗ್ ಬುದ್ಧ ಚಿತ್ರತಂಡ..!

ರಾಜ್ಯದ ಸಮಸ್ತ ಪೊಲೀಸ್ ಸಿಬ್ಬಂದಿಗಳಿಗೆ “ಪೊಲೀಸ್ ಧ್ವಜ ದಿನದ” ಶುಭಾಶಯ ತಿಳಿಸಿದ ಲಾಫಿಂಗ್ ಬುದ್ಧ ಚಿತ್ರತಂಡ..!

ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಲಾಫಿಂಗ್ ಬುದ್ಧ ಸಿನಿಮಾ ಶೂಟಿಂಗ್ ಕೆಲಸಗಳು ಈಗಾಗಲೇ ಮುಗಿದಿವೆ. ಇದೀಗ ಇದೇ ಚಿತ್ರತಂಡದಿಂದ ಕರ್ನಾಟಕ ಪೊಲೀಸ್ ಇಲಾಖೆಗೆ ಶುಭಾಶಯಗಳು ರವಾನೆಯಾಗಿವೆ.

ಪೊಲೀಸ್ ಧ್ವಜ ದಿನದ ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದೆ. ಧೈರ್ಯದ ಮತ್ತೊಂದು ಹೆಸರು ಮತ್ತು ಪ್ರತೀಕವಾಗಿರುವ ಕೆಚ್ಚೆದೆಯ ಪೊಲೀಸರಿಗೆ  ಲಾಫಿಂಗ್ ಬುದ್ಧ ಚಿತ್ರತಂಡ ಅಭಿನಂದನೆ ತಿಳಿಸಿದೆ.

ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಲ್ಲಿ ಲಾಫಿಂಗ್ ಬುದ್ಧ ಸಿನಿಮಾ ನಿರ್ಮಾಣವಾಗುತ್ತಿದೆ. ಭರತ್ ರಾಜ್ ಎಂ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ತೇಜು ಬೆಳವಾಡಿ, ಸುಂದರ್ ರಾಜ್ ಸೇರಿ ಇನ್ನೂ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ಶೂಟಿಂಗ್ ವಿಚಾರಕ್ಕೆ ಬಂದರೆ, ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಮುಗಿದಿದ್ದು, ಶೀಘ್ರದಲ್ಲಿಯೇ ಲಾಫಿಂಗ್ ಬುದ್ಧ ಚಿತ್ರಮಂದಿರಕ್ಕೆ ಬರಲಿದೆ.

ಇದನ್ನೂ ಓದಿ : ಚಾಮರಾಜನಗರ, ಮೈಸೂರು ಕ್ಷೇತ್ರಗಳ ಗೆಲುವಿಗೆ ಸಿಎಂ ಸಿದ್ದು ಮಾಸ್ಟರ್​ ಪ್ಲಾನ್​​..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here