Download Our App

Follow us

Home » ಮೆಟ್ರೋ » ಅಮ್ಮ ನನಗೆ ಪ್ರತಿದಿನ ನಾಯಿಗೆ ಬಡಿದಂಗೆ ಬಡೀತಾಳೆ : 112ಕ್ಕೆ ಕರೆ ಮಾಡಿ ಅಮ್ಮನ ವಿರುದ್ದವೇ ಕಂದನ ದೂರು..!

ಅಮ್ಮ ನನಗೆ ಪ್ರತಿದಿನ ನಾಯಿಗೆ ಬಡಿದಂಗೆ ಬಡೀತಾಳೆ : 112ಕ್ಕೆ ಕರೆ ಮಾಡಿ ಅಮ್ಮನ ವಿರುದ್ದವೇ ಕಂದನ ದೂರು..!

ಬೆಂಗಳೂರು : ತಾಯಿ ಮಗಳಿಗೆ ಸಣ್ಣ ವಿಷಯಕ್ಕೆ ಹಲ್ಲೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಗಳು 112 ಗೆ ಕರೆ ಮಾಡಿ, ಅಮ್ಮನ ವಿರುದ್ದವೇ ಮಗಳು ದೂರು ನೀಡಿದ್ದಾಳೆ.

ಬಾಲಕಿ 112 ಗೆ ಕರೆ ಮಾಡಿ, ಪೊಲೀಸ್​ ಅಂಕಲ್​​​ ನನಗೆ ಪ್ರತಿದಿನ ಅಮ್ಮ ನಾಯಿಗೆ ಬಡಿದಂಗೆ ಬಡೀತಾಳೆ. ಪ್ಲೀಸ್​ ನಮ್ಮಮ್ಮನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಿದ್ದಾಳೆ. ಪುಟ್ಟೀ ಎಲ್ಲಿಂದ ಫೋನ್​ ಮಾಡ್ತಿದ್ದೀಯಮ್ಮ ಎಂದು ಪೊಲೀಸ್ ವಿಚಾರಿಸಿದ್ದಕ್ಕೆ ಲಗ್ಗೆರೆ ಅಂತಾ ಪುಟ್ಟ ಬಾಲಕಿ ಉತ್ತರ ಕೊಟ್ಟಿದ್ದಾಳೆ.

ಕೂಡಲೇ ನಂದಿನಿ ಲೇಔಟ್ ಪೊಲೀಸರಿಗೆ ಕರೆ ವರ್ಗಾವಣೆಯಾಗಿದ್ದು, ಬಳಿಕ ನಂದಿನಿ ಲೇಔಟ್ ಪೊಲೀಸರು ಬಾಲಕಿ ಜೊತೆ ಮಾತ್ನಾಡಿದ್ದಾರೆ. ಆಗ ಬಾಲಕಿಯ ಅಡ್ರಸ್ ಹೇಳುವಂತೆ ಪೊಲೀಸರು ಕೇಳಿದ್ದು, ಬಳಿಕ ಪೊಲೀಸರು ತಾಯಿ ಮೊಬೈಲ್​ ನಂಬರ್​ ಪಡೆದು ಕಾಲ್​ ಮಾಡಿದ್ದಾರೆ.

ಫೋನ್​​ನಲ್ಲಿ ಪೊಲೀಸರ ಮೇಲೇ ತಾಯಿ ಗರಂ ಆಗಿದ್ದು, ನನ್ನ ಮಗಳು.. ನಾನು ಹೊಡೀತೀನಿ.. ಬಡೀತೀನಿ ನಿಮಗೇನು..? ನನ್ನ ಮಗಳಿಗೆ ನಾನು ಹೊಡೆಯೋದ್ರಲ್ಲಿ ಏನ್ ತಪ್ಪು. ಇಡಯ್ಯಾ ಫೋನ್ ಅಂತ ಬಾಲಕಿಯ ತಾಯಿ ಕಾಲ್ ಕಟ್ ಮಾಡಿದ್ದಾಳೆ. ತಾಯಿ ಪೊಲೀಸರಿಗೆ ನಿಂದಿಸಿರೋ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತೊಂದೆಡೆ ಫ್ರೆಂಡ್​ ಕ್ರಿಕೆಟ್​ ಬ್ಯಾಟಿಂಗ್ ಕೊಡ್ಲಿಲ್ಲ ಅಂತಾ ಬಾಲಕ ಪೊಲೀಸ್​ಗೆ ಕರೆ ಮಾಡಿದ್ದಾನೆ. ಹೌದು.. ಪೊಲೀಸ್​ನ್ನು ಕರೆಸಿ ಬಾಲಕ ಬ್ಯಾಟಿಂಗ್ ಪಡೆದುಕೊಂಡಿದ್ದಾನೆ.

ಫ್ರೆಂಡ್ಸ್ ನನ್ನನ್ನು ಆಟಕ್ಕೆ ಸೇರಿಸಿಕೊಳ್ತಿಲ್ಲ, ಸೇರಿಸಿಕೊಂಡ್ರು ಬ್ಯಾಟಿಂಗ್,ಬೌಲಿಂಗ್ ಕೊಡ್ತಿಲ್ಲ. ಬೇಗ ಪೊಲೀಸ್ ಕಳಿಸಿ ಬ್ಯಾಟಿಂಗ್ ಕೊಡಿಸಿ ಎಂದು ಬಾಲಕ ಫೋನ್​​​ ಮಾಡಿದ್ದಾನೆ. ಬಾಲಕನ ಕರೆಗೆ ಕಂಟ್ರೋಲ್ ರೂಂ. ತಲೆಕೆಡಿಸಿಕೊಂಡಿದ್ದು, ತಕ್ಷಣ ಹೊಯ್ಸಳ ಕಳುಹಿಸಿ ಬಾಲಕನ ಕ್ರಿಕೆಟ್ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ.

ಇದನ್ನೂ ಓದಿ : ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ : ಅಯೋಧ್ಯೆಯಲ್ಲಿ ಬಿಗಿ ಭದ್ರತೆ..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here