Download Our App

Follow us

Home » ರಾಷ್ಟ್ರೀಯ » ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ : ಅಯೋಧ್ಯೆಯಲ್ಲಿ ಬಿಗಿ ಭದ್ರತೆ..!

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ : ಅಯೋಧ್ಯೆಯಲ್ಲಿ ಬಿಗಿ ಭದ್ರತೆ..!

ಅಯೋಧ್ಯೆ : ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಅಯೋಧ್ಯೆಗೆ ದೇಶದ ಗಣ್ಯಾತಿಗಣ್ಯರು ಆಗಮಿಸ್ತಿದ್ದಾರೆ. ಹಾಗಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಅಯೋಧ್ಯೆಯಲ್ಲಿ ಪೊಲೀಸರು ಇಂಚಿಂಚೂ ಬಿಡದೇ ಪರಿಶೀಲನೆ ಮಾಡ್ತಿದ್ದಾರೆ. SPG, NSG, CRPF, ATS, STF, PAC ಸೇರಿ ವಿಶೇಷ ಪಡೆಗಳ ಬಳಕೆ ಮಾಡಿದ್ದಾರೆ.

ಡ್ರೋನ್​​ ಕ್ಯಾಮೆರಾಗಳ ಮೂಲಕ ರಾಮಮಂದಿರದ ನೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. 100 PPS, 17 IPS, ಬ್ಲಾಕ್​​ ಕಮಾಂಡೋಗಳು ನಿಗಾ ವಹಿಸಿದ್ದಾರೆ. ನಾಳೆ ಅಯೋಧ್ಯೆಗೆ 7000ಕ್ಕೂ ಹೆಚ್ಚು ಅತಿಥಿಗಳು ಬರ್ತಿದ್ದಾರೆ. ಹಾಗಾಗಿ 20,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಿದ್ದಾರೆ.

ರಾಮಮಂದಿರ ಕಾರಣಕ್ಕಾಗಿ ಅಯೋಧ್ಯೆ ನಗರಿ ದೇಶದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ದೇಶ-ವಿದೇಶಗಳ 11 ಸಾವಿರ ವಿವಿಐಪಿಗಳು ರಾಮನೂರಿಗೆ ಆಗಮಿಸುವ ಕಾರಣ ಗರಿಷ್ಠ ಭದ್ರತೆ ಒದಗಿಸಲಾಗಿದೆ. ಭೂಮಿ, ನೀರು, ವಾಯುಪ್ರದೇಶದಲ್ಲಿ ತೀವ್ರ ನಿಗಾ ಇರಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರು : ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಚಾಲಕ..!

Leave a Comment

DG Ad

RELATED LATEST NEWS

Top Headlines

ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ CA ಸೈಟ್ ವಾಪಸ್ ನೀಡಿದ ಖರ್ಗೆ ಫ್ಯಾಮಿಲಿ..!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮಗೆ ನೀಡಿದ್ದ 14 ಸೈಟುಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್‌ ನೀಡಿದ್ದರು. ಸಿದ್ದು

Live Cricket

Add Your Heading Text Here