Download Our App

Follow us

Home » ಜಿಲ್ಲೆ » ವಿಜಯಪುರದಲ್ಲಿ ಸಾತ್ವಿಕ್ ರಕ್ಷಣೆಗೆ ರಣರೋಚಕ ಆಪರೇಷನ್ : ಕಂದಮ್ಮ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ..!

ವಿಜಯಪುರದಲ್ಲಿ ಸಾತ್ವಿಕ್ ರಕ್ಷಣೆಗೆ ರಣರೋಚಕ ಆಪರೇಷನ್ : ಕಂದಮ್ಮ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ..!

ವಿಜಯಪುರ : ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಂದ ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ NDRF, SDRF ತಂಡಗಳು ರಕ್ಷಣಾ ಕಾರ್ಯಾಚರಣೆಯ ವೇಗ ಹೆಚ್ಚಿಸಿವೆ. ರಕ್ಷಣೆ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಮಗು ಹೊರತೆಗೆಯಲಿದ್ದಾರೆ.

ಕೊನೇ ಹಂತದ ಕಾರ್ಯಾಚರಣೆ ಮಾಡ್ತಿರುವ ರಕ್ಷಣಾ ಸಿಬ್ಬಂದಿ ಜೆಸಿಬಿ ಬಳಸಿ ಕೊಳವೆ ಬಾವಿ ಪಕ್ಕದಲ್ಲೇ ರಂಧ್ರ ಕೊರೆದ್ದಾರೆ. ಇನ್ನು ಕೊರೆಯಲಾದ ರಂಧ್ರಕ್ಕೆ ಇಳಿದ ರಕ್ಷಣಾ ಸಿಬ್ಬಂದಿಗೆ ಕೊಲವೆ ಒಳಗೆ ಸಿಲುಕಿಕೊಂಡ ಮಗುವಿನ ಧ್ವನಿ ಕೇಳಿದ್ದು, ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ಕೊಳವೆ ಬಾವಿಯಲ್ಲಿ ಅಳುತ್ತಿರುವ ಸಾತ್ವಿಕ್​ ಉಸಿರಾಟಕ್ಕಾಗಿ ಸತತ ಆಕ್ಸಿಜನ ಪೂರೈಕೆ  ಮಾಡಲಾಗುತ್ತಿದ್ದು, ಸುರಕ್ಷಿತವಾಗಿ ಸಾತ್ವಿಕ್​ ಹೊರತೆಗೆಯಲು ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ. ಮಗುವಿನ ರಕ್ಷಣೆಗೆ ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ, ಪೊಲೀಸರು,  ಸೇರಿದಂತೆ ಎಲ್ಲರೂ ರಾತ್ರಿ ಇಡೀ ಕಣ್ಣಿಗೆ ನಿದ್ದೆ ಇಲ್ಲದೇ ಸಾತ್ವಿಕ್​ನ ರಕ್ಷಣೆ ಮಾಡಲು ತೊಡಗಿದ್ದಾರೆ. ಇನ್ನು ಮಗುವಿಗಾಗಿ ಅನ್ನ, ನೀರು ಬಿಟ್ಟ ಕಾದು ಕುಳಿತಿರುವ ಹೆತ್ತ ಕರಳು ಸತತ 17 ಗಂಟೆಯಿಂದ ನೀರು ಕುಡಿಯದೆ ಸಾತ್ವಿಕ್​ ತಾಯಿ ಕಾಯುತ್ತಿದ್ದಾರೆ.

ಇದನ್ನೂ ಓದಿ : ಲೋಕಸಭಾ ಅಖಾಡದಲ್ಲಿ ಝಣ ಝಣ ಕಾಂಚಾಣದ ಸದ್ದು – ಮಾ.17 ರಿಂದ ಏ.2 ರವರೆಗೆ ಸೀಜ್​ ಆಗಿದ್ದೇಷ್ಟು ಗೊತ್ತಾ?

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here