Download Our App

Follow us

Home » ಸಿನಿಮಾ » ಧೀರ ಭಗತ್ ರಾಯ್ ಸಿನಿಮಾದ “ಏನು ಕರ್ಮ” ಸಾಂಗ್ ರಿಲೀಸ್..!

ಧೀರ ಭಗತ್ ರಾಯ್ ಸಿನಿಮಾದ “ಏನು ಕರ್ಮ” ಸಾಂಗ್ ರಿಲೀಸ್..!

ರಂಗಭೂಮಿ ಹಿನ್ನೆಲೆಯಿಂದ ಬಂದ ಎಷ್ಟೋ ಕಲಾವಿದರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗ್ತಿರುವವರು ರಾಕೇಶ್ ದಳವಾಯಿ. ‘ಧೀರ ಭಗತ್ ರಾಯ್’ ಚಿತ್ರದ ಮೂಲಕ ರಾಕೇಶ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಕರ್ಣನ್ ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಏನು ಕರ್ಮ ಹಾಡು ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಕುರಿತು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಪ್ರತಿಕಾಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕರಾದ ಕರ್ಣನ್.ಎಸ್, ಏನು ಕರ್ಮ ಸಾಂಗ್ ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹಾಡು 2 ಲಕ್ಷ ವೀಕ್ಷಣೆ ಕಂಡಿದ್ದು, ಖುಷಿ ಇದೆ. ಪೂರ್ಣ ಸರ್ ಅದ್ಭುತ ಲಿರಿಕ್ಸ್ ಎಲ್ಲರಿಗೂ ಇಷ್ಟವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ. 1970ರ ದಶಕದಲ್ಲಿ ಭೂಮಿ ಸುಧಾರಣೆ ಕಾಯ್ದೆ ಜಾರಿಗೆ ಬರುತ್ತದೆ, ನರಗುಂದದಲ್ಲಿ ಒಂದಷ್ಟು ರೈತರಿಗೆ ಭೂಮಿ ಸಿಗುತ್ತದೆ. ಆದರೆ ಅಲ್ಲಿನ ಭೂ ಮಾಲೀಕ ಜನರಿಗೆ ಸರಿಯಾಗಿ ಸಿಗಲು ಬಿಡದೆ ಜಮೀನನ್ನು ಕಬ್ಜ ಮಾಡಿರುತ್ತಾರೆ. ಅದನ್ನು ಚಿತ್ರ ನಾಯಕ ಜನರಿಗೆ ತಲುಪಿಸಲು ನಡೆಯುವ ಹೋರಾಟ, ಸಂಘರ್ಷ ಚಿತ್ರದ ಕಥಾವಸ್ತು ಎಂದರು.

ನಾಯಕ ನಟ ರಾಕೇಶ್ ದಳವಾಯಿ ಮಾತನಾಡಿ. ನಾನು ಪರಿಪೂರ್ಣ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಧೀರ ಭಗತ್ ರಾಯ್. ಭಯ ಮತ್ತು ಜವಾಬ್ದಾರಿ ಎರಡನ್ನು ಒಟ್ಟಿಗೆ ಹಂಚಿಕೊಳ್ತಾ, ಎರಡು ವರ್ಷ ಧೀರ ಭಗತ್ ರಾಯ್ ಜೊತೆ ಜೀವಿಸಿದ್ದೇವೆ. ಹೆಣ್ಣು, ಪ್ರೀತಿ ಹಾಗೂ ಜವಾಬ್ದಾರಿಯನ್ನು ಏನೋ ಕರ್ಮ ಹಾಡಿನ ಮೂಲಕ ಹೇಳಿದ್ದೇವೆ. ನಾನು ಲಯರ್ ಪಾತ್ರ ಮಾಡಿದ್ದೇನೆ. ಅದು ಚಾಲೆಂಜಿಂಗ್ ವಿಷ್ಯ. ಕರ್ಣನ್ ಸರ್ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೀರೋಯಿನ್ ಸಿನಿಮಾಗೆ ಹೊಸಬರು. ಅವರಿಗೆ ಚಿತ್ರ ಚಾಲೆಂಜ್ ಆಗಿತ್ತು ಎಂದರು.

ನಾಯಕಿ ಸುಚರಿತಾ ಸಹಾಯರಾಜ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಹೀಗಾಗಿ ಟೆನ್ಷನ್ ಇದ್ದೇ ಇರುತ್ತದೆ. ನನ್ನ ಪಾತ್ರ ಸಾವಿತ್ರಿ ತುಂಬಾ ಸ್ಟ್ರಾಂಗ್ ಆಗಿ ಇದೆ. ನನ್ನಲ್ಲಿ ಸಾವಿತ್ರಿಯನ್ನು ಹೇಗೆ ಅಳವಡಿಸಿಕೊಳ್ಳುವುದು ಅನ್ನೋದನ್ನು ಥಿಂಕ್ ಮಾಡಿದೆ. ಅದಕ್ಕೆ ನಿರ್ದೇಶಕರು ಸಾಕಷ್ಟು ಸಪೋರ್ಟ್ ಮಾಡಿದರು. ಈ ಪಾತ್ರ ನೋಡಿದಾಗ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

ಧೀರ ಭಗತ್ ರಾಯ್ ಸಿನಿಮಾದ ‘ಏನು ಕರ್ಮ’ ಸಾಹಿತ್ಯ ಇರುವ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಪೂರ್ಣ ಚಂದ್ರ ತೇಜಸ್ವಿ ಪದ ಪೊಣಿಸಿ ಟ್ಯೂನ್ ಹಾಕಿರುವ ಗಾನಲಹರಿಗೆ ವಿಜಯ್ ಪ್ರಕಾಶ್ ಹಾಗೂ ಸಾಕ್ಷಿ ಕಲ್ಲೂರ್ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ. ಮನಮೋಹಕವಾಗಿರುವ ಈ ಸಾಂಗ್ ನಲ್ಲಿ ರಾಕೇಶ್ ಹಾಗೂ ಸುಚಾರಿತ ಕಾಣಿಸಿಕೊಂಡಿದ್ದಾರೆ. ಕರ್ಣನ್.ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಒಳಗೊಂಡ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ರಾಕೇಶ್ ಮತ್ತು ಸುಚರಿತಾ ಸಹಾಯರಾಜ್ ನಾಯಕ ಮತ್ತು ನಾಯಕಿಯಾಗಿ ನಟಿಸುತ್ತಿದ್ದಾರೆ.

ಶರತ್ ಲೋಹಿತಾಶ್ವ ಖಳನಟನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಪ್ರವೀಣ್ ಹಗಡೂರು, ಮಠ ಕೊಪ್ಪಳ, ಸುಧೀರ್ ಕುಮಾರ್ ಮುರೊಳ್ಳಿ, ಶಶಿಕುಮಾರ್, ಫಾರೂಕ್ ಅಹ್ಮದ್, ಚಂದ್ರಿಕಾ ಗೌಡ, ನಯನ, ಸಿದ್ದಾರ್ಥ್ ಗೋವಿಂದ್, ಅನಿಲ್ ಹೊಸಕೊಪ್ಪ, ಪ್ರೊಫೇಸರ್ ಹರಿರಾಮ್, ಪಿ ಮೂರ್ತಿ, ಹೆಮಾನುಷ್ ಗೌಡ, ರಮೇಶ್ ಕುಮಾರ್, ಸಂದೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀ ಓಂ ಸಿನಿ ಎಂಟರ್ಟೈನರ್ಸ್ ಹಾಗೂ ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಎಂ.ಸೆಲ್ವಂ ಜಾನ್ ಛಾಯಾಗ್ರಹಣ, ವಿಶ್ವ ಎನ್.ಎಂ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ : ಕೊನೆಗೂ ಜಾತಿ ಗಣತಿ ವರದಿ ಸಲ್ಲಿಕೆ – ಎರಡು ಬಾಕ್ಸ್ ವರದಿ ಪ್ರತಿಗಳನ್ನು ಸಿಎಂ ಸಿದ್ದರಾಮಯ್ಯಗೆ ಹಸ್ತಾಂತರಿಸಿದ ಜಯಪ್ರಕಾಶ್ ಹೆಗ್ಡೆ..!

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here