Download Our App

Follow us

Home » ರಾಜ್ಯ » ಕೊನೆಗೂ ಜಾತಿ ಗಣತಿ ವರದಿ ಸಲ್ಲಿಕೆ – ಎರಡು ಬಾಕ್ಸ್ ವರದಿ ಪ್ರತಿಗಳನ್ನು ಸಿಎಂ ಸಿದ್ದರಾಮಯ್ಯಗೆ ಹಸ್ತಾಂತರಿಸಿದ ಜಯಪ್ರಕಾಶ್ ಹೆಗ್ಡೆ..!

ಕೊನೆಗೂ ಜಾತಿ ಗಣತಿ ವರದಿ ಸಲ್ಲಿಕೆ – ಎರಡು ಬಾಕ್ಸ್ ವರದಿ ಪ್ರತಿಗಳನ್ನು ಸಿಎಂ ಸಿದ್ದರಾಮಯ್ಯಗೆ ಹಸ್ತಾಂತರಿಸಿದ ಜಯಪ್ರಕಾಶ್ ಹೆಗ್ಡೆ..!

ಬೆಂಗಳೂರು : ಭಾರೀ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ಅಧಿಕೃತವಾಗಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು.

ಮಧ್ಯಾಹ್ನ ವಿಧಾನಸೌಧಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಕೆ ಜಯಪ್ರಕಾಶ್‌ ಹೆಗ್ಡೆ ಅವರು, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ವರದಿಯ ಪ್ರತಿಯನ್ನು ಹಸ್ತಾಂತರ ಮಾಡಿದರು.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಜಾತಿ ಗಣತಿ ಬಗ್ಗೆ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯೋಗದ ವರದಿಯನ್ನ ನಾನು ಸ್ವೀಕರಿಸಿದ್ದೇನೆ. ಶೀಘ್ರವೇ ಸಂಪುಟದ ಮುಂದೆ ವರದಿ ಇಡುತ್ತೇವೆ. ಸಂಪುಟದಲ್ಲಿ ವರದಿ ಬಗ್ಗೆ ಸಮಾಲೋಚನೆ ಆಗಲಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ‌”ಇದು ಜಾತಿ ಗಣತಿ ವರದಿ ಅಲ್ಲ. ಬದಲಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ವರದಿ. ಈ ವರದಿಗೆ ಯಾರ ವಿರೋಧವೂ ಇಲ್ಲ. ಈಗ ವರದಿ ಸ್ವೀಕಾರ ಮಾಡುತ್ತೇವೆ. ಅದರಲ್ಲಿ ಏನ್ ಮಾಹಿತಿ ಇದೆ ಗೊತ್ತಿಲ್ಲ,” ಎಂದರು. “ವರದಿಯನ್ನು ಯಾರೂ ನೋಡಿಲ್ಲ. ಈಗಷ್ಟೇ ವರದಿ ಸರಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಹೀಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ. ವರದಿಯನ್ನ ಯಾರು ಓದಿದ್ದಾರೆ? ಯಾರು ಓದಿಲ್ಲ. ಹಾಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಜಾತಿ ಗಣತಿ ವರದಿಯಲ್ಲಿ ಏನೇನಿದೆ?
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ಕೂಡ ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.

  • 2015 ರ ಸಮಗ್ರ ವರದಿ ಈಗ ಸಲ್ಲಿಕೆ
  • ಜಾತಿ ವರ್ಗಗಳ ಪ್ರಮುಖ ಲಕ್ಷಣ
  • ಸಾಮಾಜಿಕ ಶೈಕ್ಕ್ಷಣಿಕ ಮಾಹಿತಿಗಳ ಸ್ಥಿತಿಗತಿಗಳ ಬಗ್ಗೆ
  • SC-ST ಹೊರತು ಪಡಿಸಿ ಜಾತಿ ವರ್ಗಗಳ ಲಕ್ಷಣ
  • 13 ಪ್ರತಿಗಳ ವರದಿ ಸಲ್ಲಿಸಲಿರುವ ಆಯೋಗ
  • ಸಂಪುಟ 1ರಲ್ಲಿ ಜಾತಿವಾರು ಜನಸಂಖ್ಯಾ ವಿವರ
  • 8 ಸಂಪುಟಗಳಲ್ಲಿ ಜಾತಿ/ ವರ್ಗಗಳ ಪ್ರಮುಖ ಲಕ್ಷಣ
  • ಒಂದು ಸಂಪುಟದಲ್ಲಿ ಪರಿಶಿಷ್ಟ ಜಾತಿಗಳ ಪ್ರಮುಖ ಲಕ್ಷಣ
  • ಮತ್ತೊಂದು ಸಂಪುಟದಲ್ಲಿ ಪರಿಶಿಷ್ಟ ಪಂಗಡಗಳ ಲಕ್ಷಣ
  • ಎರಡು CDಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿಅಂಶ
  • ಮತ್ತೊಂದು ಸಂಪುಟದಲ್ಲಿ ಸಾಮಾಜಿಕ ಶೈಕ್ಷಣಿಕ ದತ್ತಾಂಶಗಳ ವರದಿ ಇದೆ.

ಇದನ್ನೂ ಓದಿ : ಶೇ.60 ರಷ್ಟು ಕನ್ನಡ ಬೋರ್ಡ್ ​ಅಳವಡಿಕೆ ಕಡ್ಡಾಯಕ್ಕೆ 2 ವಾರ ಗಡುವು ವಿಸ್ತರಣೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here