ಚಿಕ್ಕಬಳ್ಳಾಪುರ : ಯಾರೆಲ್ಲ ಸಿಂಗಲ್ಸ್ ಇದೀರಾ.. ಯಾರೆಲ್ಲ ಸಿಂಗಲ್ ಲೈಫ್ ಸಾಕು ಮದುವೆಯಾಗಿ ಹ್ಯಾಪಿ ಆಗಿರೋಣ ಅಂತಿದೀರಾ ಅವರೆಲ್ಲ ಈ ಸ್ಟೋರಿಯನ್ನ ಮಿಸ್ ಮಾಡದೇ ನೋಡ್ಲೇಬೇಕು. ನೀವೇನಾದ್ರೂ ಯಾಮಾರಿ ಯಾರನ್ನೋ ಮದುವೆಯಾಗ್ಬಿಟ್ರೆ ಮಕ್ಮಲ್ ಟೋಪಿ ಗ್ಯಾರಂಟಿ. ಇದೀಗ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದೆ. ಐಷಾರಾಮಿ ಜೀವನಕ್ಕಾಗಿ ಮದುವೆ ನಾಟಕವಾಡ್ತಿದ್ದ ಮಹಿಳೆಯನ್ನ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಕೋಮಲಾ ಬಂಧಿತ ಮಹಿಳೆ.
ಬಂಧಿತ ಆರೋಪಿ ಕೋಮಲಾ 6 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದಳು. ಗಂಡನ ಕಳೆದುಕೊಂಡ ಮೇಲೆ ಮೋಜು ಮಸ್ತಿಯ ಜೀವನಕ್ಕಾಗಿ ಕೋಮಲಾ ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಈ ಪ್ರೊಫೈಲ್ನಲ್ಲಿ ಮೈಮಾಟದ ಸಖತ್ ಫೋಟೋಸ್ ಅಪ್ಲೋಡ್ ಮಾಡುತ್ತಿದ್ದಳು.
ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ಆ್ಯಕ್ಟಿವ್ ಆಗಿದ್ದ ಕಿಲಾಡಿ ಕೋಮಲಾ, ರಾಘವೇಂದ್ರ ಎಂಬುವರ ಜೊತೆಯಲ್ಲಿ ಚಾಟಿಂಗ್ ಮಾಡ್ತಯಿದ್ಲು. ಬಳಿಕ ಗೌರಿಬಿದನೂರಿನ ರಾಘವೇಂದ್ರ ಅನ್ನೋರಿಗೆ ಮದ್ವೆಯಾಗ್ತೀನಿ ಎಂದ ಕೋಮಲ ದಿವಂಗತ ಗಂಡನ 6 ಕೋಟಿ ರೂಪಾಯಿ ಬ್ಯಾಂಕ್ನಲ್ಲೇ ಇದೆ. ತೆರಿಗೆ ಕಟ್ಟದ್ದಕ್ಕೆ ಹಣ ಹೋಲ್ಡ್ ಆಗಿದ್ದು, 6 ಕೋಟಿ ರಿಲೀಸ್ ಆದ್ರೆ ನಮ್ ಲೈಫ್ ಸ್ವರ್ಗವಾಗುತ್ತೆ ಎಂದು ರಾಘವೇಂದ್ರ ಬಳಿ 7 ಲಕ್ಷ ರೂ. ಕೇಳಿದ್ದಾಳೆ.
ಸ್ವರ್ಗದ ಅಮಲಿನಲ್ಲಿ ರಾಘವೇಂದ್ರ 7,40,000 ರೂ. ಕೊಟ್ಟಿದ್ದಾನೆ. ಆಕೆಯ ಖಾತೆಗೆ ಹಣ ಬರ್ತಿದ್ದಂತೆಯೇ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾಳೆ. ಮೋಸ ಹೋಗಿದ್ದು ಅರಿವಾದ ಮೇಲೆ ರಾಘವೇಂದ್ರ ಮಹಿಳೆ ವಿರುದ್ಧ ದೂರು ನೀಡಿದ್ದರು. ದೂರಿನ ಮೇರೆಗೆ ಕೋಮಲಾಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕೋಮಲ ಅರೆಸ್ಟ್ ಆದ್ಮೇಲೆ ಅಸಲಿ ಸತ್ಯ ಬಯಲಾಗಿದೆ. ಐಷಾರಾಮಿ ಜೀವನಕ್ಕಾಗಿ ಮದ್ವೆಯನ್ನೇ ಬ್ಯುಸಿನೆಸ್ ಮಾಡಿಕೊಂಡ ಕೋಮಲ ಬೆಂಗಳೂರಿನ ತಾವರೆಕೆರೆ ಮೂಲದ ಮಧುಸೂಧನ್ ಅನ್ನೋರಿಗೂ 10 ಲಕ್ಷ ರೂ ಮೋಸ ಮಾಡಿರುವುದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಿನ ನಾಗರಾಜು ಎಂಬುವವರ ಬಳಿಯೂ 1 ಲಕ್ಷ 50 ಸಾವಿರ ಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. ಸದ್ಯ ಗುಜರಾತ್ನಲ್ಲಿ ನೆಲೆಸಿರೋ ಕುಂದಾಪುರದ ರಾಘವೇಂದ್ರಗೆ ವಂಚನೆ ಮಾಡಿರುವ ತಿಳಿದು ಬಂದಿದೆ. ಇಬ್ಬರಿಗೆ ಮದುವೆ ಮಾಡಿಕೊಳ್ಳುವುದಾಗಿ ಆಂಟಿ ಆಮಿಷವೊಡ್ಡಿದ್ದಳು. ಅಷ್ಟರಲ್ಲಿ ಪೊಲೀಸರು ಕಿಲಾಡಿ ಕೋಮಲಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇನ್ನು ಕೋಮಲಾ ಗುಜರಾತ್, ಬೆಂಗಳೂರು ಸೇರಿದಂತೆ ಹಲವೆಡೆ ವಿಧವೆಯಾಗಿ ಮಕ್ಕಳಿಲ್ಲ ಎಂದು ನಂಬಿಸಿ ಹಲವು ಜನರಿಗೆ ಆನ್ಲೈನ್ನಲ್ಲಿ ವಂಚನೆ ಮಾಡಿದ್ಧಾಳೆ. ತನಿಖೆ ವೇಳೆ ಕೋಮಲಾಗೆ 20 ವರ್ಷದ ಮಗ, 16 ವರ್ಷದ ಮಗಳಿರುವುದಾಗೆ ತಿಳಿದು ಬಂದಿದೆ. ರಾಘವೇಂದ್ರ ದೂರು ಆಧರಿಸಿ ಸೆನ್ DYSP ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ..
ಇದನ್ನೂ ಓದಿ : ಒಂದೇ ದಿನ 16 ಪ್ರಕರಣ ಭೇದಿಸಿ 23 ದಂಧೆಕೋರರ ಚಳಿ ಬಿಡಿಸಿದ ಹುಬ್ಬಳ್ಳಿ ಕಮಿಷನರ್..!